“ಹಾರೋಪ್‌ ಡ್ರೋನ್‌”ಗಳ ಖರೀದಿಗೆ ರಕ್ಷಣಾ ಸಚಿವಾಲಯ ಸಮ್ಮತಿ

0
621

ರಕ್ಷಣಾ ವ್ಯವಸ್ಥೆಗೆ ಭಾರಿ ಬಲ ತಂದುಕೊಡಲಿದೆ ಎಂದು ಭಾವಿಸಿರುವ ಇಸ್ರೇಲಿನ ಮಾನವರಹಿತ ದಾಳಿಕೋರ ಹಾರೋಪ್‌ ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯ ಸಮ್ಮತಿಯ ಮುದ್ರೆ ಒತ್ತಿದೆ.

ಹೊಸದಿಲ್ಲಿ: ರಕ್ಷಣಾ ವ್ಯವಸ್ಥೆಗೆ ಭಾರಿ ಬಲ ತಂದುಕೊಡಲಿದೆ ಎಂದು ಭಾವಿಸಿರುವ ಇಸ್ರೇಲಿನ ಮಾನವರಹಿತ ದಾಳಿಕೋರ ಹಾರೋಪ್‌ ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯ ಸಮ್ಮತಿಯ ಮುದ್ರೆ ಒತ್ತಿದೆ. 

ಒಟ್ಟು 54 ಇಸ್ರೇಲಿ ಹಾರೋಪ್‌ ಡ್ರೋನ್‌ಗಳ ಖರೀದಿಗೆ ಸಮ್ಮತಿ ನೀಡಲಾಗಿದೆ. ”ಕಳೆದ ವಾರ ಸೇರಿದ್ದ ಉನ್ನತ ಮಟ್ಟದ ಸಭೆಯು 54 ಹಾರೋಪ್‌ಗಳ ಖರೀದಿ ಪ್ರಸ್ತಾಪಕ್ಕೆ ಸಮ್ಮತಿ ನೀಡಿದೆ,” ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಇಂತಹ 110 ಡ್ರೋನ್‌ಗಳು ಭಾರತೀಯ ವಾಯು ಪಡೆಯ ಬತ್ತಳಿಕೆಯಲ್ಲಿವೆ. ಆದರೆ, ಹಾರೋಪ್‌ ಡ್ರೋನ್‌ಗಳನ್ನು ತಾಂತ್ರಿಕವಾಗಿ ಇನ್ನಷ್ಟು ಉನ್ನತೀಕರಿಸಲಾಗಿದ್ದು, ಪಿ-4 ಎಂದು ಮರು ನಾಮಕರಣ ಮಾಡಲಾಗಿದೆ. 

ಇವುಗಳ ಸೇರ್ಪಡೆಯೊಂದಿಗೆ ಭಾರತೀಯ ಸೇನಾ ಪಡೆಗಳ ಸಾಮರ್ಥ್ಯ‌ದಲ್ಲಿ ಗಣನೀಯ ಸುಧಾರಣೆಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.