ಹಾಕಿ: ಶಿವೇಂದ್ರಸಿಂಗ್‌ ಸಹಾಯಕ ಕೋಚ್‌

0
299

ಪುರುಷರ ರಾಷ್ಟ್ರೀಯ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಹಿರಿಯ ಆಟಗಾರ ಶಿವೇಂದ್ರ ಸಿಂಗ್‌ ನೇಮಕಗೊಂಡಿದ್ದು, ಮುಂದಿನ ತಿಂಗಳಿನಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ನವದೆಹಲಿ (ಪಿಟಿಐ): ಪುರುಷರ ರಾಷ್ಟ್ರೀಯ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಹಿರಿಯ ಆಟಗಾರ ಶಿವೇಂದ್ರ ಸಿಂಗ್‌ ನೇಮಕಗೊಂಡಿದ್ದು, ಮುಂದಿನ ತಿಂಗಳಿನಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ತಂಡದ ಮುಖ್ಯ ತರಬೇತುದಾರರನ್ನಾಗಿ ಆಸ್ಟ್ರೇಲಿಯಾದ ಗ್ರಹಾಂ ರೈಡ್‌ ಅವರ ಹೆಸರನ್ನು ಹಾಕಿ ಇಂಡಿಯಾ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರವು ಕಳೆದ ವಾರ ಕ್ರೀಡಾ ಸಚಿವಾಲಯದ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. 

ರೈಡ್‌ ಅವರು ಪ್ರಸಕ್ತ ನೆದರ್ಲೆಂಡ್‌ ಹಾಕಿ ತಂಡ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈಡ್‌ ನೇಮಕಾತಿಗೆ ಭಾರತದ ಕ್ರೀಡಾ ಸಚಿವಾಲಯದ ಅನುಮತಿ ನೀಡಿದ ಒಂದು ತಿಂಗಳ ಒಳಗಾಗಿ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 
 
ರೈಡ್‌ ನೇತೃತ್ವದ ತರಬೇತುದಾರರ ತಂಡದ ಸ್ಟ್ರೈಕರ್‌ ವಿಭಾಗದಲ್ಲಿ ಶಿವೇಂದ್ರ ಸಿಂಗ್‌ ಅವರು  ಕಾರ್ಯನಿರ್ವಹಿಸಲಿದ್ದಾರೆ.  2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ಬೆಳ್ಳಿಪದಕ ಪಡೆದಿತ್ತು. ಶಿವೇಂದ್ರಸಿಂಗ್‌ ಈ ವೇಳೆ ತಂಡದಲ್ಲಿದ್ದರು. ಅದೇ ವರ್ಷ ಗುವಾಂಗ್‌ಝ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡ ಕಂಚಿನ ಪದಕ ಪಡೆದಿತ್ತು. 2007ರಲ್ಲಿ ಏಷ್ಯಾ ಕಪ್‌ನಲ್ಲಿ ಚಿನ್ನ ಹಾಗೂ 2010ರಲ್ಲಿ ನಡೆದ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಗೆದ್ದಿದ್ದ ಭಾರತ ತಂಡದಲ್ಲಿ ಶಿವೇಂದ್ರ ಅವರು ಸದಸ್ಯರಾಗಿದ್ದರು.