ಹಾಂಕಾಂಗ್‌ ಕ್ರಿಕೆಟ್ : ನಿವೃತ್ತಿ ಘೋಷಿಸಿದ 21 ವರ್ಷದ ಕ್ರಿಕೆಟಿಗ “ಕ್ರಿಸ್ಟೋಫರ್ ಕಾರ್ಟರ್”

0
834

ಇಪ್ಪತ್ತೊಂದನೇ ವಯಸ್ಸಿಗೆ ಬಹಳಷ್ಟು ಅಂತರರಾಷ್ಟ್ರೀಯ ಕ್ರಿಕೆಟಿಗರ ವೃತ್ತಿಜೀವನ ಆರಂಭವಾಗುತ್ತದೆ. ಆದರೆ ಹಾಂಕಾಂಗ್‌ ತಂಡದ ಕ್ರಿಸ್ಟೋಫರ್ ಕಾರ್ಟರ್ ಅವರು ಇದೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆವರು ಪೈಲೆಟ್ ಆಗುವತ್ತ ಮುಖ ಮಾಡಿದ್ದಾರೆ.

ಹಾಂಕಾಂಗ್: ಇಪ್ಪತ್ತೊಂದನೇ ವಯಸ್ಸಿಗೆ ಬಹಳಷ್ಟು ಅಂತರರಾಷ್ಟ್ರೀಯ ಕ್ರಿಕೆಟಿಗರ ವೃತ್ತಿಜೀವನ ಆರಂಭವಾಗುತ್ತದೆ. ಆದರೆ ಹಾಂಕಾಂಗ್‌ ತಂಡದ ಕ್ರಿಸ್ಟೋಫರ್ ಕಾರ್ಟರ್ ಅವರು ಇದೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆವರು ಪೈಲೆಟ್ ಆಗುವತ್ತ ಮುಖ ಮಾಡಿದ್ದಾರೆ.

2015ರಲ್ಲಿ ಹಾಂಕಾಂಗ್ ತಂಡಕ್ಕೆ ಪದಾರ್ಪಣೆ ವಿಕೆಟ್‌ಕೀಪರ್ ಆಗಿ ಮಾಡಿದ್ದ ಕಾರ್ಟರ್ 11 ಅಂತರರಾಷ್ಟ್ರೀಯ ಏಕದಿನ ಹಾಗೂ ಹತ್ತು  ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಆತ್ಯಂತ ಸಣ್ಣ ಅವಧಿ ಹಾಗೂ ಕಡಿಮೆ ವಯಸ್ಸಿನಲ್ಲಿ ವಿದಾಯ ಹೇಳಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗ ಅವರಾಗಿದ್ದಾರೆ.

 

‘ಕ್ರಿಕೆಟ್‌ನಿಂದ ನನ್ನ ವಿಮಾನ ಪೈಲೆಟ್ ತರಬೇತಿ ಅರ್ಧಕ್ಕೆ ನಿಂತಿದೆ. ಹೀಗಾಗಿ ನಾನು ವಿದಾಯ ಹೇಳುತ್ತಿದ್ದೇನೆ. ಪೈಲೆಟ್ ತರಬೇತಿಗೆ ತೆರಳುತ್ತಿದ್ದೇನೆ’ ಎಂದು ಕಾರ್ಟರ್ ಹೇಳಿದ್ದಾರೆ.

ಅವರು ಈಚೆಗೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ  ಆಡಿದ್ದರು. ಹಾಂಕಾಂಗ್ ತಂಡವು ಭಾರತದ ಎದುರು ಸೋತಿತ್ತು.