‘ಹವಾಮಾನ ವೈಪರೀತ್ಯ ತಡೆಗೆ ಮಹತ್ವದ ಬದಲಾವಣೆ ಅವಶ್ಯ’ : ವಿಶ್ವಸಂಸ್ಥೆ

0
522

ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ತಡೆಗಟ್ಟಲು ಸಮಯ ಮೀರಿಹೋಗುತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ, ವಿಪತ್ತು ತಡೆಗಟ್ಟಬೇಕೆಂದರೆ ಹಿಂದೆಂದೂ ಆಗದ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಆಗಬೇಕಾಗುತ್ತವೆ ಎಂದು ಹೇಳಿದೆ.

ಇಂಚನ್ (ದಕ್ಷಿಣ ಕೊರಿಯಾ)(ಎಎಫ್‌ಪಿ): ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ತಡೆಗಟ್ಟಲು ಸಮಯ ಮೀರಿಹೋಗುತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ, ವಿಪತ್ತು ತಡೆಗಟ್ಟಬೇಕೆಂದರೆ ಹಿಂದೆಂದೂ ಆಗದ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಆಗಬೇಕಾಗುತ್ತವೆ ಎಂದು ಹೇಳಿದೆ.

ಭೂಮಿಯ ಮೇಲ್ಮೈ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದರಿಂದ ಪ್ರವಾಹ, ಬರಗಾಲ ಹಾಗೂ ಸಮುದ್ರದಲ್ಲಿ ತೀವ್ರ ಒತ್ತಡಕಾರಿಯಾದ ಚಂಡಮಾರುತ ಉಂಟಾಗುವ ಅಪಾಯ ಇದೆ ಎಂದು ‘ಹವಾಮಾನ ಬದಲಾವಣೆಯ ಅಂತರ್‌ಸರ್ಕಾರದ ಸಮಿತಿ’ (ಐ‍‍ಪಿಸಿಸಿ) ವರದಿಯಲ್ಲಿ ವಿಶ್ವಸಂಸ್ಥೆಯನ್ನು ಉಲ್ಲೇಖಿಸಿ ಹೇಳಲಾಗಿದೆ.

ಅಲ್ಲದೆ ಭೂಮಿಯ ಮೇಲ್ಮೈ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್ ತಲುಪುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದೂ ತಿಳಿಸಲಾಗಿದೆ.

ಜಾಗತಿಕ ತಾಪಮಾನದಿಂದ ಉಂಟಾಗುತ್ತದೆ ಎಂದು ಅಂದಾಜಿಸಿದ್ದ ಸಂಕಷ್ಟ ಅವಧಿಗೆ ಮೊದಲೇ ಎದುರಾಗಿದೆ ಹಾಗೂ ಹೆಚ್ಚು ತೀವ್ರವಾಗಿ ಬಾಧಿಸುತ್ತಿದೆ ಎನ್ನುವುದು ಈ ವರದಿಯಿಂದ ತಿಳಿಯುತ್ತಿದೆ.

‘ಭವಿಷ್ಯದಲ್ಲಿ ಆಗಬಹುದು ಎಂದು ವಿಜ್ಞಾನಿಗಳು ಊಹಿಸಿದ್ದ ಸಂಗತಿಗಳು ಈಗಲೇ ಸಂಭವಿಸುತ್ತಿವೆ’ ಎಂದು ಗ್ರೀನ್‌ಪೀಸ್‌ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಜೆನಿಫರ್ ಮಾರ್ಗನ್ ತಿಳಿಸಿದ್ದಾರೆ.

 ‘ಮಾನವ ಜನಾಂಗದ ಇತಿಹಾಸದಲ್ಲಿ ಮುಂದಿನ ಕೆಲವು ವರ್ಷಗಳು ಅತ್ಯಂತ ಮಹತ್ವದ್ದಾಗಿರಲಿವೆ’ ಎಂದು ಐಪಿಸಿಸಿ ಉಪಾಧ್ಯಕ್ಷರಾದ ಡೆಬ್ರಾ ರಾಬರ್ಟ್ಸ್‌ ತಿಳಿಸಿದ್ದಾರೆ.