ಹವಾಮಾನ ಬದಲಾವಣೆ ಕುರಿತು ಉಪಗ್ರಹ ಉಡಾವಣೆ : ಚೀನಾ

0
364

ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲು ಮೊದಲ ಬಾರಿಗೆ ಫ್ರಾನ್ಸ್‌ ಸಹಯೋಗದಲ್ಲಿ ನಿರ್ಮಿಸಿರುವ ಉಪಗ್ರಹವನ್ನು ಚೀನಾ ಅಕ್ಟೋಬರ್ 29 ರ ಸೋಮವಾರ ಉಡಾವಣೆ ಮಾಡಿದೆ.

ಬೀಜಿಂಗ್ (ಎಎಫ್‌ಪಿ): ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲು ಮೊದಲ ಬಾರಿಗೆ ಫ್ರಾನ್ಸ್‌ ಸಹಯೋಗದಲ್ಲಿ ನಿರ್ಮಿಸಿರುವ ಉಪಗ್ರಹವನ್ನು ಚೀನಾ ಅಕ್ಟೋಬರ್ 29 ರ ಸೋಮವಾರ ಉಡಾವಣೆ ಮಾಡಿದೆ. 

ಸುಧಾರಿತ ತಂತ್ರಜ್ಞಾನ ಬಳಸಿ ಸಮುದ್ರದ ಮೇಲ್ಮೈ ಅಲೆಗಳು ಹಾಗೂ ಗಾಳಿಯ ಮೇಲೆ ನಿಗಾ ಇರಿಸುವ ಮೂಲಕ, ಅಪಾಯಕಾರಿ ಚಂಡಮಾರುತ ಹಾಗೂ ಹವಾಮಾನ ಬದಲಾವಣೆ ಕುರಿತು ಮುನ್ಸೂಚನೆ ಪಡೆಯಲು ಇದು ನೆರವಾಗಲಿದೆ. 

650 ಕೆ.ಜಿ ತೂಕದ ಈ ಉಪಗ್ರಹದಲ್ಲಿ ಫ್ರಾನ್ಸ್ ನಿರ್ಮಿತ ಸ್ವಿಮ್ ಸ್ಪೆಕ್ಟ್ರೊಮೀಟರ್ (ಅಲೆಗಳ ದಿಕ್ಕು ಹಾಗೂ ತರಂಗಾಂತರ ಅಳೆಯುತ್ತದೆ) ಹಾಗೂ ಚೀನಾದ ಸ್ಕಾಟ್ (ಅಲೆಗಳ ತೀವ್ರತೆ) ಎನ್ನುವ ಎರಡು ರಾಡಾರ್‌ಗಳನ್ನು ಅಳವಡಿಸಲಾಗಿದೆ. 

ಎರಡೂ ದೇಶಗಳು ದತ್ತಾಂಶ ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸುತ್ತವೆ.