ಹವಾಮಾನ ಬದಲಾವಣೆ ಕರಗಲಿವೆ ಹಿಮಗಡ್ಡೆಗಳು : ಅಧ್ಯಯನ ವರದಿ

0
16

ಹವಾಮಾನ ಬದಲಾವಣೆಯ ಪರಿಣಾಮ ಈಗ ಉತ್ತರ ಧ್ರುವವನ್ನು ಆವರಿಸಿರುವ, ನೀರ್ಗಲ್ಲುಗಳಿರುವ ಆರ್ಕ್ಟಿಕ್‌ ಸಾಗರದ ಮೇಲೂ ಉಂಟಾಗುತ್ತಿದೆ. 2044–2067ರ ಅವಧಿಯಲ್ಲಿ ಸಾಗರದಲ್ಲಿರುವ ಹಿಮಗಡ್ಡೆಗಳು ನಿಧಾನಕ್ಕೆ ಕರಗಲು ಆರಂಭಿಸಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಲಾಸ್‌ ಏಂಜಲೀಸ್ (ಪಿಟಿಐ): ಹವಾಮಾನ ಬದಲಾವಣೆಯ ಪರಿಣಾಮ ಈಗ ಉತ್ತರ ಧ್ರುವವನ್ನು ಆವರಿಸಿರುವ, ನೀರ್ಗಲ್ಲುಗಳಿರುವ ಆರ್ಕ್ಟಿಕ್‌ ಸಾಗರದ ಮೇಲೂ ಉಂಟಾಗುತ್ತಿದೆ. 2044–2067ರ ಅವಧಿಯಲ್ಲಿ ಸಾಗರದಲ್ಲಿರುವ ಹಿಮಗಡ್ಡೆಗಳು ನಿಧಾನಕ್ಕೆ  ಕರಗಲು ಆರಂಭಿಸಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಆರ್ಕ್ಟಿಕ್‌ ಮಹಾಸಾಗರ ಉತ್ತರಧ್ರುವವನ್ನು ಆವರಿಸಿದ್ದು, ಚಳಿಗಾಲದಲ್ಲಿ ಬಹುತೇಕ ಹೆಪ್ಪುಗಟ್ಟಿದ ಸ್ಥಿತಿಯಲ್ಲಿರುತ್ತದೆ. ಉಳಿದ ಅವಧಿಯಲ್ಲಿ ಭಾರಿ ಗಾತ್ರದಹಿಮಗಡ್ಡೆಗಳಿರುತ್ತವೆ. ಅತ್ಯಂತ ಶೀತ ವಾತಾವರಣವುಳ್ಳ ಪ್ರದೇಶ ಇದಾಗಿದೆ.

ಇಲ್ಲಿನ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಮಹಾಸಾಗರದಲ್ಲಿ ಚಳಿ ಮತ್ತು ಬೇಸಿಗೆ ಕಾಲದಲ್ಲಿ ಇರುವ ಹಿಮಗಡ್ಡೆಗಳ ಪ್ರಮಾಣದಲ್ಲಿನ ಅಂತರ ಕಡಿಮೆ ಆಗುತ್ತಿದೆ. ಉಪಗ್ರಹದ ಮೂಲಕ 1979ರಿಂದಲೂ ಗಮನಿಸಿದಂತೆ ಸೆಪ್ಟೆಂಬರ್‌ ತಿಂಗಳಲ್ಲಿ ಈ ಸಾಗರದಲ್ಲಿ ಬಹುತೇಕ ಹಿಮಗಡ್ಡೆ ಇರುತ್ತದೆ. ಇದರ ಪ್ರಮಾಣ ಪ್ರತಿ ದಶಕದಲ್ಲಿಯೂ ಸರಾಸರಿ ಶೇ 13ರಷ್ಟು ಕಡಿಮೆ ಆಗುತ್ತಿದೆ.

ವಾತಾವರಣವನ್ನು ಸೇರುವ ಇಂಗಾಲದ ಪ್ರಮಾಣಕ್ಕೆ ಹವಾಮಾನ ಹೇಗೆ ಸ್ಪಂದಿಸಲಿದೆ ಎಂಬುದರ ಆಧಾರದಲ್ಲಿ ಜಾಗತಿಕ ಹವಾಮಾನ ಬದಲಾವಣೆಗೆ ಅನುಸಾರವಾಗಿ ವಿಜ್ಞಾನಿಗಳು ಹಿಮಸಾಗರದ ಸ್ಥಿತ್ಯಂತರವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.

ಕೆಲ ಅಂದಾಜಿನ ಪ್ರಕಾರ, 2026ರ ವೇಳೆಗೇ ಹಿಮಗಡ್ಡೆಗಳಿಂದ ಮುಕ್ತವಾದ ಸಾಗರ ಕಾಣಬಹುದು.

ಅಧ್ಯಯನದ ಮುಖ್ಯ ಲೇಖಕಚಾಡ್‌ ಥ್ಯಾಕರೆ ಅವರು, ‘ಸಾಗರದಲ್ಲಿ ಹಿಮಗಡ್ಡೆಯ ಭಾಗ ಕರಗಿದಾಗ,ಪ್ರಸ್ತುತ ಅಂಧಕಾರದಲ್ಲಿರುವ ನೀರಿನ ಭಾಗ ಸೂರ್ಯ ರಶ್ಮಿಗೆ ತೆರೆದುಕೊಳ್ಳಲಿದೆ. ಈ ಬದಲಾವಣೆ ಪ್ರತಿಫಲನದಲ್ಲಿಯೂ ವ್ಯಕ್ತವಾಗಲಿದೆ. ಜಾಗತಿಕ ಹವಾಮಾನ ಬದಲಾವಣೆ ಪರಿಣಾಮ ಇದಾಗಿದ್ದು, ಇದರಿಂದ ಹಿಮಗಡ್ಡೆಗಳು ಕರಗುವ ಪ್ರಮಾಣವೂ ಹೆಚ್ಚಾಗಲಿದೆ’ ಎಂದರು.