ಹಣ ಪಾವತಿಗೆ ಗೂಗಲ್‌ನಿಂದ ‘Tez’ ಆ್ಯಪ್‌: ಅರುಣ್ ಜೇಟ್ಲಿ ಬಿಡುಗಡೆ.

0
17

ಮೊಬೈಲ್‌ ಮೂಲಕ ಹಣ ಪಾವತಿಸಲು ಸಹಕಾರಿಯಾಗುವ ‘ತೇಜ್‌’ ಆ್ಯಂಡ್ರಾಯ್ಡ್‌ ಆ್ಯಪ್‌ ಅನ್ನು ಗೂಗಲ್‌ ಬಿಡುಗಡೆ ಮಾಡಿದ್ದು, ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಸೋಮವಾರ (18/09/2017)ದಂದು ನೂತನ ಆ್ಯಪ್‌ ಬಿಡುಗಡೆ ಮಾಡಿದರು. ಭಾರತದ ಆ್ಯಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತೇಜ್‌ ಆ್ಯಪ್‌ ಬಳಸಿ ಹಣ ವರ್ಗಾವಣೆ ಮಾಡಬಹುದು.

ಮೊಬೈಲ್‌ ಮೂಲಕ ಹಣ ಪಾವತಿಸಲು ಸಹಕಾರಿಯಾಗುವ ‘ತೇಜ್‌’ ಆ್ಯಂಡ್ರಾಯ್ಡ್‌ ಆ್ಯಪ್‌ ಅನ್ನು ಗೂಗಲ್‌ ಬಿಡುಗಡೆ ಮಾಡಿದೆ.

ತೇಜ್ ಆ್ಯಪ್‌ ಬಿಡುಗಡೆಗೊಳಿಸಿದವರು ಯಾರು?

ವಿತ್ತ ಸಚಿವ ಅರುಣ್ ಜೇಟ್ಲಿ ಸೋಮವಾರ ನೂತನ ಆ್ಯಪ್‌ ಬಿಡುಗಡೆ ಮಾಡಿದರು. ಭಾರತದ ಆ್ಯಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತೇಜ್‌ ಆ್ಯಪ್‌ ಬಳಸಿ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್‌ ಖಾತೆಯಿಂದ ಹಣ ಪಾವತಿ, ನೇರವಾಗಿ ಖಾತೆಗೆ ಹಣ ಜಮೆ ಹಾಗೂ ಬಿಲ್‌ ಪಾವತಿ ಸಾಧ್ಯವಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ದ ಏಕೀಕೃತ ಪಾವತಿ ವ್ಯವಸ್ಥೆಯೊಂದಿಗೆ ತೇಜ್‌ ಮೂಲಕ ಹಣ ವರ್ಗವಾಣೆ ಸುಲಭ ಹಾಗೂ ಸುರಕ್ಷಿತ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಹುಮಾನ ಗೆಲ್ಲುವ ಅವಕಾಶ:- ಆ್ಯಪ್‌ನಲ್ಲಿನ ತೇಜ್‌ ಸ್ಕ್ರಾಚ್‌ ಕಾರ್ಡ್‌ನಿಂದ ಪ್ರತಿ ವಹಿವಾಟಿನ ಮೇಲೆ ₹1000 ಬಹುಮಾನ ಗೆಲ್ಲಬಹುದಾಗಿದೆ. ಪ್ರತಿ ಭಾನುವಾರ ನಡೆಯುವ ವಿಶೇಷ ಸ್ಪರ್ಧೆಯಲ್ಲಿ ₹1 ಲಕ್ಷದವರೆಗೂ ಗೆಲ್ಲುವ ಅವಕಾಶವಿದೆ. ಗೂಗಲ್‌ ಸಂಸ್ಥೆಯು ಆಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಎಸ್‌ಬಿಐ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

ಆ್ಯಪ್‌ ನ ಉಪಯುಕ್ತತೆಗಳು:-
# ಮೊಬೈಲ್‌ ಸಂಖ್ಯೆ ಅಥವಾ ಬ್ಯಾಂಕ್‌ ಖಾತೆ ವಿವರ ನೀಡದೆಯೇ ಹಣ ವರ್ಗಾವಣೆ ಮಾಡಬಹುದಾಗಿದೆ. ಫೋನ್‌ನ ಮೈಕ್ರೋಫೋನ್‌ ಮತ್ತು ಸ್ಪೀಕರ್‌ ಮುಖೇನ ಅಲ್ಟ್ರಾಸೌಂಡ್‌ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆ ಸಂಪರ್ಕ ಸಾಧಿಸುತ್ತದೆ.

# ಆ್ಯಪ್‌ನಲ್ಲಿ ಬ್ಯಾಂಕ್ ಖಾತೆ ವಿವರ ನಮೂದಿಸಿ, ನೇರ ಹಣ ವರ್ಗಾವಣೆ ಮಾಡಬಹುದು.

# ವಹಿವಾಟಿನಲ್ಲಿ ಉನ್ನತ ಮಟ್ಟದ ಸುರಕ್ಷತೆ ಇರುತ್ತದೆ.

# ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಆ್ಯಪ್‌ ಬಳಕೆ ಮಾಡಬಹುದಾಗಿದೆ.