ಹಂಪಿ ಅತ್ಯುತ್ತಮ ಪ್ರವಾಸಿ ತಾಣ

0
645

ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ.

ನವದೆಹಲಿ: ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ.

ಶ್ರೀಲಂಕಾ, ಒಮನ್‌, ಭೂತಾನ್‌, ಮಂಗೊಲಿಯಾ ಮತ್ತು ಜಪಾನ್‌ನ ನಿಸೆಕೊ ಇತರ ಐದು ಪ್ರಮುಖ ತಾಣಗಳಾಗಿವೆ. ಐದು ಅತ್ಯುತ್ತಮ ಪ್ರವಾಸಿ ಬ್ಲಾಗ್‌ಗಳ ತಜ್ಞರ ಸಮಿತಿ ಏಷ್ಯಾದ ತಾಣಗಳನ್ನು ಆಯ್ಕೆ ಮಾಡಿದೆ. ‘ಟ್ರಾವೆಲ್‌ಲೆಮ್ಮಿಂಗ್‌.ಕಾಮ್‌’ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ಜಾಗತಿಕವಾಗಿ ಗುರುತಿಸಲಾದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ.

‘ಹಂಪಿ ರೀತಿಯ ತಾಣ ಮತ್ತೊಂದಿಲ್ಲ. ಅಲ್ಲಿನ ದೃಶ್ಯಗಳು ಸುಂದರವಾಗಿದೆ’ ಎಂದು ಸಮಿತಿಯಲ್ಲಿದ್ದ ಪಾಪುಲರ್‌ ಬ್ಲಾಗ್‌ ಟ್ರಾವೆಲ್ಸ್‌ನ ಆ್ಯಡ್‌ಂ ಗ್ರಾಫ್‌ಮನ್‌ ಬಣ್ಣಿಸಿದ್ದಾರೆ.