ಸ್ವಿಟೋಲಿನಾ ಡಬ್ಲ್ಯುಟಿಎ ಚಾಂಪಿಯನ್

0
677

ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಒಮ್ಮೆಯೂ ಸೆಮಿಫೈನಲ್ ಪಂದ್ಯವಾಡದ ಉಕ್ರೇನ್​ನ 24 ವರ್ಷದ ಆಟಗಾರ್ತಿ ಎಲಿನಾ ಸ್ವಿಟೋಲಿನಾ, ಮಹಿಳಾ ಟೆನಿಸ್​ನ ವರ್ಷಾಂತ್ಯದ ಟೂರ್ನಿ ಡಬ್ಲ್ಯುಟಿಎ ಫೈನಲ್ಸ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇದು ಸ್ವಿಟೋಲಿನಾ ಟೆನಿಸ್ ವೃತ್ತಿಜೀವನದಲ್ಲಿ ಈವರೆಗೂ ಗೆದ್ದ ಬಹುದೊಡ್ಡ ಪ್ರಶಸ್ತಿ ಎನಿಸಿಕೊಂಡಿದೆ.

ಸಿಂಗಾಪುರ: ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಒಮ್ಮೆಯೂ ಸೆಮಿಫೈನಲ್ ಪಂದ್ಯವಾಡದ ಉಕ್ರೇನ್​ನ 24 ವರ್ಷದ ಆಟಗಾರ್ತಿ ಎಲಿನಾ ಸ್ವಿಟೋಲಿನಾ, ಮಹಿಳಾ ಟೆನಿಸ್​ನ ವರ್ಷಾಂತ್ಯದ ಟೂರ್ನಿ ಡಬ್ಲ್ಯುಟಿಎ ಫೈನಲ್ಸ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇದು ಸ್ವಿಟೋಲಿನಾ ಟೆನಿಸ್ ವೃತ್ತಿಜೀವನದಲ್ಲಿ ಈವರೆಗೂ ಗೆದ್ದ ಬಹುದೊಡ್ಡ ಪ್ರಶಸ್ತಿ ಎನಿಸಿಕೊಂಡಿದೆ.

ಭಾನುವಾರ(ಅಕ್ಟೋಬರ್ 28) ಸಿಂಗಾಪುರ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ 2 ಗಂಟೆ 23 ನಿಮಿಷದ ಫೈನಲ್ ಪಂದ್ಯದಲ್ಲಿ ಸ್ವಿಟೋಲಿನಾ, ಮೊದಲ ಸೆಟ್​ನಲ್ಲಿ ಸೋಲು ಕಂಡರೂ 3-6, 6-2, 6-2 ರಿಂದ 2017ರ ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಸ್ಲೋವನ್ ಸ್ಟೀಫನ್ಸ್​ರನ್ನು ಸೋಲಿಸಿದರು. ಅದರೊಂದಿಗೆ 2013ರಲ್ಲಿ ಸೆರೇನಾ ವಿಲಿಯಮ್್ಸ ಬಳಿಕ ಮೊದಲ ಬಾರಿಗೆ ಅಜೇಯವಾಗಿ ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಗೆದ್ದ ಆಟಗಾರ್ತಿ ಎನಿಸಿಕೊಂಡರು. ಭರ್ಜರಿ ಫಾಮರ್್​ನಲ್ಲಿದ್ದ ಸ್ವಿಟೋಲಿನಾ ಪ್ರಶಸ್ತಿ ಹಾದಿಯಲ್ಲಿ ಪೆಟ್ರಾ ಕ್ವಿಟೋವಾ, ಕ್ಯಾರೋಲಿನಾ ಪ್ಲಿಸ್ಕೋವಾ, ಕ್ಯಾರೋಲಿನ್ ವೋಜ್ನಿಯಾಕಿ ಹಾಗೂ ಕಿಕಿ ಬಾರ್ತೆನ್ಸ್ ಹಾಗೂ ಸ್ಟೀಫನ್ಸ್​ರನ್ನು ಸೋಲಿಸಿದರು.

6ನೇ ಶ್ರೇಯಾಂಕದ ಸ್ವಿಟೋಲಿನಾ ಈವರೆಗೂ ಗ್ರಾಂಡ್ ಸ್ಲಾಂ ಟೂರ್ನಿ ಗಳಲ್ಲಿ ಕ್ವಾರ್ಟರ್​ಫೈನಲ್ ಪಂದ್ಯವಾಡಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಎ ಫೈನಲ್ಸ್ ಆಡಿದ್ದ ಸ್ವಿಟೋಲಿನಾ, ರೌಂಡ್ ರಾಬಿನ್ ಹಂತದಲ್ಲಿಯೇ ನಿರ್ಗಮಿಸಿದ್ದರು. ಇದರೊಂದಿಗೆ ಹಾಲಿ ಋತುವನ್ನು ಜೀವನಶ್ರೇಷ್ಠ 4ನೇ ರ್ಯಾಂಕ್​ನೊಂದಿಗೆ ಕೊನೆಗೊಳಿಸಲಿರುವ ಸ್ವಿಟೋಲಿನಾ 2018ರಲ್ಲಿ ಗೆದ್ದ 4ನೇ ಪ್ರಶಸ್ತಿ ಇದು.