ಸ್ವದೇಶಿ ನಿರ್ಮಿತ ಮೊದಲ ಹೈಸ್ಪೀಡ್ ರೈಲಿಗೆ ಚಾಲನೆ

0
292

ಸ್ವದೇಶಿ ನಿರ್ಮಿತ ಮೊದಲ ಎಂಜಿನ್‌ ರಹಿತ ‘ಟ್ರೈನ್ 18’ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿಲೋಹಾನಿ ಅವರು ಅಕ್ಟೋಬರ್ 29 ರ ಸೋಮವಾರ ಚಾಲನೆ ನೀಡಿದರು.

ಚೆನ್ನೈ (ಪಿಟಿಐ): ಸ್ವದೇಶಿ ನಿರ್ಮಿತ ಮೊದಲ ಎಂಜಿನ್‌ ರಹಿತ ‘ಟ್ರೈನ್ 18’ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿಲೋಹಾನಿ ಅವರು ಅಕ್ಟೋಬರ್ 29 ರ ಸೋಮವಾರ ಚಾಲನೆ ನೀಡಿದರು. 

ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್‘ನಲ್ಲಿ ಈ ರೈಲನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ ‘ಶತಾಬ್ದಿ ಎಕ್ಸ್‌ಪ್ರೆಸ್‌’ಗಳ ಜಾಗದಲ್ಲಿ ಇಂಥದ್ದೇ ರೈಲುಗಳು ಓಡಲಿವೆ.

ಈ ರೈಲಿನಲ್ಲಿ ಎಂಜಿನ್ ಬದಲಿಗೆ ಪ್ರತಿ ಬೋಗಿಯಲ್ಲಿ ಎರಡು ವಿದ್ಯುತ್ ಮೋಟರ್‌ಗಳಿವೆ. ಹೀಗಾಗಿ ವೇಗವರ್ಧನೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಉತ್ತಮವಾಗಿರಲಿದೆ.