ಸ್ಮೃತಿ ಮಂದನಾ ವಿಶ್ವ ನಂ.1 ಬ್ಯಾಟ್ಸ್ ಮನ್ ಆಟಗಾರ್ತಿ

0
985

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 1 ಶತಕ ಹಾಗೂ 90 ರನ್ ಬಾರಿಸಿದ ಭಾರತ ತಂಡದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಆಟಗಾರ್ತಿ ಸ್ಮೃತಿ ಮಂದನಾ ಐಸಿಸಿಯ ಬ್ಯಾಟಿಂಗ್ ರ‍್ಯಾಂಕಿಂಗ್‌​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ದುಬೈನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 1 ಶತಕ ಹಾಗೂ 90 ರನ್ ಬಾರಿಸಿದ ಭಾರತ ತಂಡದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಐಸಿಸಿಯ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

2018ರಿಂದ ಆರಂಭವಾಗಿ ಆಡಿದ 15 ಏಕದಿನ ಪಂದ್ಯಗಳಿಂದ 2 ಶತಕ ಹಾಗೂ 8 ಅರ್ಧಶತಕ ಬಾರಿಸಿರುವ ಮಂದನಾ 3 ಸ್ಥಾನ ಏರಿಕೆ ಕಂಡು ವಿಶ್ವ ನಂ.1 ಪಟ್ಟ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಎಲ್ಲೀಸ್ ಪೆರ್ರಿ, ಮೆಗ್ ಲ್ಯಾನಿಂಗ್ ಹಾಗೂ ನ್ಯೂಜಿಲೆಂಡ್​ನ ಆಮಿ ಸ್ಯಾಟರ್ತ್​ವೈಟ್ ನಂತರದ ಸ್ಥಾನಗಳಲ್ಲಿದ್ದರೆ, 1 ಸ್ಥಾನ ಕುಸಿತ ಕಂಡಿರುವ ನಾಯಕಿ ಮಿಥಾಲಿ ರಾಜ್ 5ನೇ ಸ್ಥಾನಕ್ಕೆ ಇಳಿದಿದ್ದಾರೆ. ಯುವ ಆಟಗಾರ್ತಿ ಜೆಮೀಮಾ ರೋಡ್ರಿಗಸ್ 64 ಸ್ಥಾನ ಏರಿಕೆ ಕಂಡು 61ನೇ ಸ್ಥಾನ ಪಡೆದಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜೆಮೀಮಾ 81 ರನ್ ಬಾರಿಸಿದ್ದರು.