ಸ್ಪೇಸ್‌ ಫೋರ್ಸ್: 2020ಕ್ಕೆ ಬಾಹ್ಯಾಕಾಶದಲ್ಲೂ ಅಮೆರಿಕ ಸೇನಾಪಡೆ

0
18

ಶಸ್ತ್ರಾಸ್ತ್ರ ಪೈಪೋಟಿ ಒಂದೆಡೆಯಾದರೆ ಮತ್ತೊಂದೆಡೆ ಬಾಹ್ಯಾಕಾಶದಲ್ಲೂ ಅಧಿಪತ್ಯ ಸ್ಥಾಪಿಸಲು ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳು ಮುಂದಾಗುತ್ತಿವೆ. ಅಮೆರಿಕ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ 2020ರ ವೇಳೆಗೆ ಪ್ರತ್ಯೇಕ ಮತ್ತು ಸುಸಜ್ಜಿತ ಸ್ಪೇಸ್ ಫೋರ್ಸ್ ಸೇನೆಯನ್ನು ಹೊಂದಲು ಸಿದ್ಧತೆ ನಡೆಸಿದೆ.

ವಾಷಿಂಗ್ಟನ್: ಶಸ್ತ್ರಾಸ್ತ್ರ ಪೈಪೋಟಿ ಒಂದೆಡೆಯಾದರೆ ಮತ್ತೊಂದೆಡೆ ಬಾಹ್ಯಾಕಾಶದಲ್ಲೂ ಅಧಿಪತ್ಯ ಸ್ಥಾಪಿಸಲು ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳು ಮುಂದಾಗುತ್ತಿವೆ.ಅಮೆರಿಕ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ 2020ರ ವೇಳೆಗೆ ಪ್ರತ್ಯೇಕ ಮತ್ತು ಸುಸಜ್ಜಿತ ಸ್ಪೇಸ್ ಫೋರ್ಸ್ ಸೇನೆಯನ್ನು ಹೊಂದಲು ಸಿದ್ಧತೆ ನಡೆಸಿದೆ. 

ಈಗಾಗಲೇ ವಿವಿಧ ಸೇನಾಪಡೆ  ಹೊಂದಿರುವ ಅಮೆರಿಕ  ಸ್ಪೇಸ್‌ ಫೋರ್ಸ್‌ ಹೊಂದುವ ಮೂಲಕ, ಬಾಹ್ಯಾಕಾಶದಲ್ಲೂ ಮಿಲಿಟರಿ ಪವರ್ ತೋರಿಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಈಗಾಗಲೇ ಸ್ಪೇಸ್ ಫೋರ್ಸ್ ಸಂಬಂಧ ತಮ್ಮ ಯೋಜನೆಯನ್ನು ಹಂಚಿಕೊಂಡಿದ್ದು, ಅದಕ್ಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ. 

ರಷ್ಯಾ ಮತ್ತು ಚೀನಾ ಜತೆಗೆ ಪೈಪೋಟಿ ಮತ್ತು ಬಲವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕ, ಬಾಹ್ಯಾಕಾಶದಲ್ಲೂ ಮಿಲಿಟರಿ ನೆಲೆ ಮತ್ತು ಸೈನ್ಯ ನಿಯೋಜಿಸಲು ಮುಂದಾಗಿದೆ. ಈಗಾಗಲೇ ಸರಕಾರ ಯೋಜನೆ ಬಗ್ಗೆ ಸೇನಾ ಮುಖ್ಯಸ್ಥರು ಮತ್ತು ಮಿಲಿಟರಿ ಸಂಬಂಧಿತ ಇಲಾಖೆಗಳ ಜತೆ ಮಾತುಕತೆ ನಡೆಸುತ್ತಿದೆ. ಯೋಜನೆಗೆ ಅನುಮತಿ ದೊರೆತ ಕೂಡಲೇ ಬಾಹ್ಯಾಕಾಶ  ಮಿಲಿಟರಿ ನೆಲೆ ಸ್ಥಾಪಿಸಲು ಅಮೆರಿಕ ಉತ್ಸುಕವಾಗಿದೆ. 

ಬಾಹ್ಯಾಕಾಶ ಯೋಜನೆಗಳಲ್ಲಿ ಅಮೆರಿಕ ಈಗಾಗಲೇ ಹಲವು ಮೈಲಿಗಲ್ಲು ಸ್ಥಾಪಿಸಿದ್ದರೂ, ಇತರ ರಾಷ್ಟ್ರಗಳಿಂದ ಸ್ಫರ್ಧೆ ಇದ್ದೇ ಇದೆ, ಹೀಗಾಗಿ ಅವೆಲ್ಲಕ್ಕಿಂತ ಭಿನ್ನವಾಗಿ ಮತ್ತು ಭವಿಷ್ಯದ ಯೋಜನೆಗಳಿಗೆ ಅನುಸಾರವಾಗಿ, ದೇಶ-ಜನ ರಕ್ಷಣೆ ಮತ್ತು ಭದ್ರತೆಯ ಉದ್ದೇಶದಿಂದ ಅಮೆರಿಕ ಸ್ಪೇಸ್ ಫೋರ್ಸ್ ಯೋಜನೆಗೆ ಮುಂದಾಗಿದೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ.