’ಸ್ಪೇಸ್‌ ಎಕ್ಸ್‌‘ ಕಂಪನಿ : 60 ಉಪಗ್ರಹ ಉಡಾವಣೆ ಮುಂದೂಡಿಕೆ

0
20

ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ಕಾರಣಗಳಿಂದ 60 ಉಪಗ್ರಹಗಳ ಉಡಾವಣೆಯನ್ನು ಅಮೆರಿಕದ ಪ್ರಮುಖ ಖಾಸಗಿ ಕಂಪನಿಯಾಗಿರುವ ’ಸ್ಪೇಸ್‌ ಎಕ್ಸ್‌‘ ಕಂಪನಿ ಮುಂದೂಡಿದೆ.

ವಾಷಿಂಗ್ಟನ್‌ (ಎಎಫ್‌ಪಿ): ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ಕಾರಣಗಳಿಂದ 60 ಉಪಗ್ರಹಗಳ ಉಡಾವಣೆಯನ್ನು ’ಸ್ಪೇಸ್‌ ಎಕ್ಸ್‌‘ ಕಂಪನಿ ಮುಂದೂಡಿದೆ.

ಯಾವ ದೇಶದ ಕಂಪನಿ :  ಅಮೆರಿಕದ ಪ್ರಮುಖ ಖಾಸಗಿ ಕಂಪನಿಯಾಗಿರುವ ಸ್ಪೇಸ್‌ಎಕ್ಸ್‌ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದೆ.

ಯಾವ ರಾಕೆಟ್ ಮೂಲಕ ಉಪಗ್ರಹಗಳ ಉಡಾವಣೆ :  ಕೇಪ್‌ ಕಾನ್‌ವೆರಲ್‌ನಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೆಸ್‌ಎಕ್ಸ್‌  ಫಾಲ್ಕನ್‌ 9‘ ರಾಕೆಟ್‌  ಮೂಲಕ ಈ ಉಪಗ್ರಹಗಳನ್ನು ಉಡಾಯಿಸಲು ಉದ್ದೇಶಿಸಲಾಗಿತ್ತು.

ಉಪಗ್ರಹ ಉಡಾವಣೆಯ ಉದ್ದೇಶ :  ಈ ಉಪಗ್ರಹಗಳ ಮೂಲಕ ಭವಿಷ್ಯದಲ್ಲಿ ಬಾಹ್ಯಾಕಾಶ ಇಂಟರ್‌ನೆಟ್‌ ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಹೊಂದುವುದು ಸ್ಪೇಸ್‌ ಎಕ್ಸ್‌ ಉದ್ದೇಶವಾಗಿದ್ದು, ಪ್ರತಿ ವರ್ಷ ಅಂದಾಜು 30 ಬಿಲಿಯನ್‌ ಡಾಲರ್‌ (2104 ಶತಕೋಟಿ) ಆದಾಯ ಗಳಿಸುವ ಗುರಿ ಹೊಂದಿದೆ.

’ಉಪಗ್ರಹದ ಸಾಫ್ಟ್‌ವೇರ್‌ ಅನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಉಡಾವಣೆ ಕೈಗೊಳ್ಳಲಾಗುವುದು‘ ಎಂದು ಕಂಪನಿ ತಿಳಿಸಿದೆ.

ಉಪಗ್ರಹಗಳ ವಿಶೇಷ :  ಪ್ರತಿಯೊಂದು ಉಪಗ್ರಹ ಕೇವಲ 227 ಕಿಲೋ ಗ್ರಾಂ ತೂಕ ಹೊಂದಿರುವುದು ವಿಶೇಷವಾಗಿದೆ. ಉಡಾವಣೆಯಾದ ಬಳಿಕ ಸುಮಾರು 550 ಕಿಲೋ ಮೀಟರ್‌ಗೆ ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ಯೋಜನೆ ರೂಪಿಸಲಾಗಿದೆ. ಭೂಮಿಯಿಂದ ಅತಿ ಕಡಿಮೆ ದೂರದಲ್ಲಿರುವುದರಿಂದ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಅತಿ ಹೆಚ್ಚು ಅನುಕೂಲವಾಗಲಿದೆ.