ಸ್ಟೀಫನ್‌ ಹಾಕಿಂಗ್ ನರ್ಸ್‌ಗೆ ನಿಷೇಧ

0
669

ಸಮರ್ಪಕ ಆರೈಕೆ ಮಾಡದ ಕಾರಣಕ್ಕಾಗಿ ದಿವಂಗತ ಬ್ರಿಟಿಷ್‌ ಖಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರ ನರ್ಸ್‌ಗೆ ನಿಷೇಧ ಹೇರಲಾಗಿದೆ.

ಲಂಡನ್‌ (ಎಎಫ್‌ಪಿ): ಸಮರ್ಪಕ ಆರೈಕೆ ಮಾಡದ ಕಾರಣಕ್ಕಾಗಿ ದಿವಂಗತ ಬ್ರಿಟಿಷ್‌ ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರ ನರ್ಸ್‌ಗೆ ನಿಷೇಧ ಹೇರಲಾಗಿದೆ.

ಹಾಕಿಂಗ್‌ ಅವರಿಗೆ ಅಗತ್ಯವಿದ್ದ ರೀತಿಯಲ್ಲಿ ಮತ್ತು ವೃತ್ತಿಪರತೆಯಿಂದ ಆರೈಕೆ ಮಾಡಿಲ್ಲ ಎನ್ನುವ ಕಾರಣಕ್ಕೆ ನರ್ಸ್‌ ಪೆಟ್ರಿಸಿಯಾ ಡೌಡಿ (61) ವಿರುದ್ಧ ಬ್ರಿಟನ್‌ನ ನರ್ಸಿಂಗ್‌ ಮತ್ತು ಮಿಡ್‌ವೈಫರಿ ಕೌನ್ಸಿಲ್‌ (ಎನ್‌ಎಂಸಿ) ಈ ಕ್ರಮಕೈಗೊಂಡಿದೆ.

ಹಣಕಾಸು ಅವ್ಯವಹಾರ, ಅಸಮರ್ಪಕ ಆರೈಕೆ, ಸರಿಯಾದ ಅರ್ಹತೆ ಇಲ್ಲದಿರುವುದು ಸೇರಿದಂತೆ ಹಲವು ಆರೋಪಗಳನ್ನು ಪಟ್ರಿಸಿಯಾ ಎದುರಿಸುತ್ತಿದ್ದರು.

‘ಇದೊಂದು ಗಂಭೀರವಾದ ಪ್ರಕರಣವಾಗಿತ್ತು. ತನ್ನ ಕರ್ತವ್ಯದಲ್ಲಿ ನರ್ಸ್‌ ವಿಫಲವಾಗಿದ್ದಾರೆ. ಜತೆಗೆ, ತನ್ನ ತಪ್ಪುಗಳಿಂದ ಹೊಸ ಪಾಠ ಕಲಿತಿದ್ದೇನೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ವೃತ್ತಿಯನ್ನು ಮುಂದುವರಿಸಲು ಎಲ್ಲ ಅರ್ಹತೆ ಹೊಂದಿದ್ದೇನೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ವಿಫಲರಾದ ಕಾರಣ ಈ ಕ್ರಮಕೈಗೊಳ್ಳಲಾಗಿದೆ’ ಎಂದು ಎನ್‌ಎಂಸಿಯ ಮ್ಯಾಥ್ಯೂ ಮ್ಯಾಕ್ಲೆಲ್ಲಾಂಡ್‌ ತಿಳಿಸಿದ್ದಾರೆ. ಕಳೆದ ವರ್ಷ ಹಾಕಿಂಗ್‌ ಅವರು ಸಾವಿಗೀಡಾಗಿದ್ದರು.

ಪೆಟ್ರಿಸಿಯಾ 15 ವರ್ಷಗಳ ಕಾಲ ಹಾಕಿಂಗ್‌ ಅವರ ಆರೈಕೆ ಮಾಡಿದ್ದರು. ಹಾಕಿಂಗ್‌ ಕುಟುಂಬ ಆರೈಕೆ ಬಗ್ಗೆ ಆರೋಪ ಮಾಡಿದ ಬಳಿಕ ಪೆಟ್ರಿಸಿಯಾ ಅವರನ್ನು ಅಮಾನತುಗೊಳಿಸಲಾಗಿತ್ತು.

ಬ್ರಿಟಿಷ್‌ ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ : ಮಾರ್ಚ್ 14, 2018 ರಂದು ಇಂಗ್ಲೆಂಡ್ ನ ಕೆಂಬ್ರಿಡ್ಜ ನಲ್ಲಿ ನಿಧನರಾಗಿದ್ದರು