ಸೌರವ್ಯೂಹ ದಾಟಿದ ವಾಯೆಜರ್‌ (ಅಯೋವಾ ವಿ.ವಿ ವಿಜ್ಞಾನಿಗಳ ಘೋಷಣೆ)

0
12

ಬಾಹ್ಯಾಕಾಶ ಅಧ್ಯಯನ ಹಾಗೂ ಅನ್ವೇಷಣೆಗಾಗಿ ನಾಲ್ಕು ದಶಕಗಳ ಹಿಂದೆ ಅಮೆರಿಕದ ನಾಸಾ ಉಡಾವಣೆ ಮಾಡಿದ್ದ ಗಗನನೌಕೆ ವಾಯೆಜರ್‌–2 ಈಗ ಸೌರವ್ಯೂಹವನ್ನು ದಾಟಿದೆ.

ವಾಷಿಂಗ್ಟನ್‌ (ಪಿಟಿಐ): ಬಾಹ್ಯಾಕಾಶ ಅಧ್ಯಯನ ಹಾಗೂ ಅನ್ವೇಷಣೆಗಾಗಿ ನಾಲ್ಕು ದಶಕಗಳ ಹಿಂದೆ ಅಮೆರಿಕದ ನಾಸಾ ಉಡಾವಣೆ ಮಾಡಿದ್ದ ಗಗನನೌಕೆ ವಾಯೆಜರ್‌–2 ಈಗ ಸೌರವ್ಯೂಹವನ್ನು ದಾಟಿದೆ.

ಈ ವಿಷಯವನ್ನು ಅಮೆರಿಕದ ಅಯೋವಾ ವಿಶ್ವವಿದ್ಯಾಲಯದ ಸಂಶೋಧಕರು ನವೆಂಬರ್ 5 ರ ಮಂಗಳವಾರ ಬಹಿರಂಗಪಡಿಸಿದ್ದು, ‘ಈ ಗಗನನೌಕೆ ತಾರೆಗಳ ನಡುವಿನ ವ್ಯೋಮಪ್ರದೇಶವನ್ನು ಪ್ರವೇಶಿಸಿದೆ’ ಎಂದು ಹೇಳಿದ್ದಾರೆ. 

ಸೌರವ್ಯೂಹವನ್ನು ದಾಟಿದ ಎರಡನೇ ಗಗನನೌಕೆ ಎಂಬ ಹೆಗ್ಗಳಿಕೆ ವಾಯೆಜರ್‌ದಾಗಿದ್ದು, ವಾಯೆಜರ್‌–1 2012ರಲ್ಲಿ ಸೌರವ್ಯೂಹದಿಂದ ನಿರ್ಗಮಿಸಿತ್ತು.

ಸೌರವ್ಯೂಹ ಅಂತ್ಯಗೊಳ್ಳುವ ಪ್ರದೇಶದಲ್ಲಿ ಗುಳ್ಳೆಯಾಕಾರದ ಆಕಾಶಕಾಯವಿದ್ದು, ಇದರಿಂದ ಹೊರಹೊಮ್ಮುವ ಗಾಳಿಗೆ ಸೌರಮಾರುತ ಎಂದು ಕರೆಯಲಾಗುತ್ತದೆ. ಬೃಹತ್‌ ತೊರೆಯ ರೀತಿಯಲ್ಲಿ ಪರಿಭ್ರಮಿಸುವ ಸೌರಮಾರುತಗಳಿಂದ ಕೂಡಿದ ಪ್ರದೇಶವನ್ನು ಅಂತರತಾರಾ ಮಾಧ್ಯಮ (ಇಂಟರ್‌ಸ್ಟೆಲ್ಲಾರ್‌ ಮೀಡಿಯಂ) ಎನ್ನಲಾಗುತ್ತದೆ. ಇದು ಸೌರವ್ಯೂಹ ಹಾಗೂ ಇತರ ತಾರಾಮಂಡಲದ ನಡುವೆ ಸಂಪರ್ಕ ಕಲ್ಪಿಸುವ ಮಾಧ್ಯಮವಾಗಿದ್ದು, ಈ ವ್ಯೋಮಪ್ರದೇಶವನ್ನೇ ಈಗ ವಾಯೆಜರ್‌–2 ಪ್ರವೇಶಿಸಿದೆ.

‘ ಈ ಗಗನನೌಕೆಯ ಪ್ರಯಾಣ ಹಲವಾರು ವೈಜ್ಞಾನಿಕ ತಿಳಿವಳಿಕೆಗೆ ಕಾರಣವಾಗಿದೆ. ಸೂರ್ಯನ ಪ್ರಭಾವದಿಂದ ದೂರ ಹೋದಂತೆಲ್ಲಾ ಸೌರಮಾರುತ ಕ್ಷೀಣಿಸುತ್ತದೆ ಎಂದು ನಂಬಲಾಗಿತ್ತು. ವಾಯೆಜರ್‌–2 ರ ಈ ಪರ್ಯಟನದಿಂದ ಇದು ಸುಳ್ಳು ಎಂಬುದು ಸಾಬೀತಾದಂತಾಗಿದೆ’ ಎಂದು ವಿ.ವಿಯ ಪ್ರಾಧ್ಯಾಪಕ ಡಾನ್‌ ಗರ್ನೆಟ್‌ ಅಭಿಪ್ರಾಯಪಟ್ಟಿದ್ದಾರೆ.

ವಾಯೆಜರ್‌–2 ವ್ಯೋಮನೌಕೆ ಭೂಮಿಯಿಂದ 119.7 ಖಗೋಳ ಮಾನ (ಎಯು) ದೂರ ಚಲಿಸಿದೆ. ಅಂದರೆ, 11 ಶತಕೋಟಿ ಮೈಲುಗಳಿಗಿಂತ ಹೆಚ್ಚು ದೂರ ಕ್ರಮಿಸಿದೆ