ಸೌರವಿದ್ಯುತ್‌: ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆ ಭಾರತ

0
26

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ನವದೆಹಲಿ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಭಾರತವು, ಚೀನಾ ಮತ್ತು ಅಮೆರಿಕ ನಂತರದ ಅತಿದೊಡ್ಡ ಮಾರುಕಟ್ಟೆಯಾಗಿದೆ. 2010ರಿಂದ ಶೇ 170ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಮೆರ್ಕಾಂ ಕಮ್ಯುನಿಕೇಷನ್ಸ್‌ ಇಂಡಿಯಾ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

2017ರಲ್ಲಿ ಭಾರತವು 9.6 ಗಿಗಾವಾಟ್‌ನಷ್ಟು ಸೌರ ವಿದ್ಯುತ್‌ ಉತ್ಪಾದಿಸಿ ಹೊಸ ದಾಖಲೆ ಬರೆದಿದೆ. 2016ರಲ್ಲಿನ 4.3 ಗಿಗಾವಾಟ್‌ನ ಎರಡು ಪಟ್ಟು ಇದಾಗಿದೆ. ಭಾರತದಲ್ಲಿನ ಒಟ್ಟಾರೆ ಸೌರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವು 2017ರ ಡಿಸೆಂಬರ್‌ ವೇಳೆಗೆ 19.6 ಗಿಗಾವಾಟ್‌ಗೆ ತಲುಪಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

‘ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು ಅಲ್ಪಾವಧಿಯಲ್ಲಿ ಪೂರೈಕೆದಾರರು ಮತ್ತು ಮಾರಾಟಗಾರರ ಪಾಲಿಗೆ ವಿಶ್ವದ ಪ್ರಮುಖ ಮಾರುಕಟ್ಟೆಯಾಗಿ ಬೆಳೆದಿದೆ’ ಎಂದು ಸಂಸ್ಥೆಯ ಸಿಇಒ ರಾಜ್‌ ಪ್ರಭು ಹೇಳಿದ್ದಾರೆ.