ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿ ಜ್ವಾಲೆ ಪತ್ತೆ

0
428

ಸೂರ್ಯನ ಮೇಲ್ಮೈನಿಂದ ಹೊಮ್ಮುವ ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿಯಾದ ಜ್ವಾಲೆಯನ್ನು ಪತ್ತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಾಷಿಂಗ್ಟನ್ (ಪಿಟಿಐ): ಸೂರ್ಯನ ಮೇಲ್ಮೈನಿಂದ ಹೊಮ್ಮುವ ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿಯಾದ ಜ್ವಾಲೆಯನ್ನು ಪತ್ತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಹುವಾಯಿಯಲ್ಲಿ ಜೇಮ್ಸ್ ಕ್ಲರ್ಕ್ಮ್ಯಾಕ್ಸ್‌ವೆಲ್ ದೂರದರ್ಶಕ (ಜೆಸಿಎಂಟಿ) ಬಳಸಿ, ಜೆಸಿಎಂಟಿ ಸಮೀಕ್ಷಾ ತಂಡದ ವಿಜ್ಞಾನಿಗಳು ನಕ್ಷತ್ರಗಳ ಹುಟ್ಟು ಅಧ್ಯಯನ ಮಾಡುವ ವೇಳೆ ಈ ವಿಷಯ ಪತ್ತೆಯಾಗಿದೆ. 

ಇದರಿಂದ ಸೌರಮಂಡಲದ ಹುಟ್ಟು ಮತ್ತು ಬೆಳವಣಿಗೆಯ ರಹಸ್ಯಗಳನ್ನು ಪತ್ತೆ ಮಾಡಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ.

‘ತೀವ್ರವಾದ  ಆಯಸ್ಕಾಂತೀಯವಲಯದಲ್ಲಿ ಉಂಟಾದ ಚಟುವಟಿಕೆಗಳಿಂದ ಉತ್ಪಾದನೆಯಾದ ಈ ಜ್ವಾಲೆಯಿಂದ, ಹೊಸದಾಗಿ ಸೃಷ್ಟಿಯಾಗುತ್ತಿರುವ ನಕ್ಷತ್ರಗಳಿಗೆ ದ್ರವ್ಯ ರವಾನೆಯಾಗುತ್ತಿತ್ತು. ಭೂಮಿಗೆ ಸಮೀಪದಲ್ಲಿ, ಕ್ಷೀರಪಥದ ಹೊರಗಿರುವ ನಕ್ಷತ್ರಗಳ ಸಮೂಹದಲ್ಲಿ ಈ ಕ್ರಿಯೆ ಉಂಟಾಗಿದ್ದು, ಕೆಲವೇ ತಾಸುಗಳು ಮಾತ್ರ ಇದು ಸಂಭವಿಸಿತ್ತು’ ಎಂದು ತಂಡದ ವಿಜ್ಞಾನಿಗಳು ಹೇಳಿದ್ದಾರೆ. 

‘ಈ ರೀತಿಯ ಘಟನೆ ನಡೆದಿರುವುದು ಬಹುಶಃ ಹುವಾಯಿಯಲ್ಲಿ ಮಾತ್ರ. ಬಾಹ್ಯಾಕಾಶ, ಕಾಲ ಹಾಗೂ ಸೃಷ್ಟಿಯ ಕುರಿತು ಎಂದಿನಿಂದಲೂನ ಇರುವ ಪ್ರಶ್ನೆಗಳಿಗೆ ಈ ಮೂಲಕ ಉತ್ತರ ದೊರಕಬಹುದು’ ಎಂದು ತಂಡದ  ಭೌತವಿಜ್ಞಾನಿ ಸ್ಟೀವ್ ಮೆರ್ಸ್ ತಿಳಿಸಿದ್ದಾರೆ.