ಸೌದಿಯ ಖ್ಯಾತ ಸಾಮಾಜಿಕ ಕಾರ್ಯಕರ್ತೆ “ಎಸ್ರಾ ಅಲ್‌-ಗಮ್ಗಮ್‌”ಗೆ ಶಿರಚ್ಛೇದ ಶಿಕ್ಷೆ

0
923

ಸೌದಿ ಅರೇಬಿಯಾದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಎಸ್ರಾ ಅಲ್‌-ಗಮ್ಗಮ್‌ಗೆ ಅಲ್ಲಿನ ಸರ್ವಾಧಿಕಾರಿ ಅಡಳಿತ ಶಿರಚ್ಛೇದ ಶಿಕ್ಷೆ ವಿಧಿಸಿದೆ. ಡಿಸೆಂಬರ್‌ 2015ರಿಂದ ಎಸ್ರಾ ಮತ್ತು ಆಕೆಯ ಗಂಡ ಮುಸಾ ಅಲ್‌-ಹಶೀಮ್‌ ಅವರನ್ನು ಸೌದಿಯ ಡಮಾಮ್‌ ನಗರದ ಜನರಲ್‌ ಇನ್ವೆಸ್ಟಿಗೇಷನ್‌ ಸೆರೆಮನೆಯಲ್ಲಿ ಬಂಧನದಲ್ಲಿಡಲಾಗಿದೆ.

ರಿಯಾದ್‌: ಸೌದಿ ಅರೇಬಿಯಾದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಎಸ್ರಾ ಅಲ್‌-ಗಮ್ಗಮ್‌ಗೆ ಅಲ್ಲಿನ ಸರ್ವಾಧಿಕಾರಿ ಅಡಳಿತ ಶಿರಚ್ಛೇದ ಶಿಕ್ಷೆ ವಿಧಿಸಿದೆ. ಡಿಸೆಂಬರ್‌ 2015ರಿಂದ ಎಸ್ರಾ ಮತ್ತು ಆಕೆಯ ಗಂಡ ಮುಸಾ ಅಲ್‌-ಹಶೀಮ್‌ ಅವರನ್ನು ಸೌದಿಯ ಡಮಾಮ್‌ ನಗರದ ಜನರಲ್‌ ಇನ್ವೆಸ್ಟಿಗೇಷನ್‌ ಸೆರೆಮನೆಯಲ್ಲಿ ಬಂಧನದಲ್ಲಿಡಲಾಗಿದೆ. 
ಬಂಧನಕ್ಕೊಳಗಾದವರನ್ನು ರಕ್ಷಿಸುವುದು, ಮಾನವ ಹಕ್ಕುಗಳ ಬೇಡಿಕೆಗಳು, ಶಾಂತಿಯುತ ಹೋರಾಟಗಳಲ್ಲಿ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ದಾಖಲಿಸಿದ ಸಂಬಂಧ ಎಸ್ರಾ ಅವರನ್ನು ಬಂಧಿಸಲಾಗಿತ್ತು. 

ಎಸ್ರಾ, ಶಿಯೈಟ್‌ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಾತಿಫ್‌ನ ಡಮಾಮ್‌ ನಗರದ ನಿವಾಸಿ. ಸೌದಿ ಅರೇಬಿಯಾದಲ್ಲಿ ಹೆಚ್ಚುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಲ್ಲಿನ ಅಡಳಿತದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಹಾಗೂ ಮಾನವ ಹಕ್ಕುಗಳ ಹೋರಾಟಕ್ಕಾಗಿ ಎಸ್ರಾ ಅವರ ವಿರುದ್ಧ ಇರುವ ಪ್ರಕರಣಗಳ ಸಂಬಂಧ ಅವರನ್ನು ಶಿರಚ್ಛೇದನ ಮಾಡುವಂತೆ ಅಲ್ಲಿನ ನ್ಯಾಯಾಲಯ ಆಗಸ್ಟ್ 20 ರ  ಸೋಮವಾರ ತೀರ್ಪು ನೀಡಿದೆ. ಆದರೆ ಶಿಕ್ಷೆ ಜಾರಿ ದಿನಾಂಕ ಬಹಿರಂಗಪಡಿಸಿಲ್ಲ. 

ಜೈಲಿನಲ್ಲಿರುವ 32 ತಿಂಗಳಿನಿಂದ ವಿಚಾರಣೆ ನಡೆಸದೇ ಮೊದಲನೇ ವಿಚಾರಣೆಯಲ್ಲೇ ಎಸ್ರಾ ಅವರಿಗೆ ಮರಣದಂಡನೆ ವಿಧಿಸಿರುವುದು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವದಲ್ಲೇ ಕಠಿಣ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಇಸ್ಲಾಮಿಕ ಕಾನೂನು ಶರಿಯಾ ಆಧಾರದಲ್ಲಿ ಕಾನೂನು ವ್ಯವಸ್ಥೆಯನ್ನು ಸೌದಿಯಲ್ಲಿ ರೂಪಿಸಲಾಗಿದೆ.