“ಸೊಹೈಲ್‌ ಮೊಹಮ್ಮದ್‌” ನೂತನ ಪಾಕ್‌ ವಿದೇಶಾಂಗ ಕಾರ್ಯದರ್ಶಿ

0
372

ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್‌ ಸೊಹೈಲ್‌ ಮೊಹಮ್ಮದ್‌ ಅವರನ್ನು ಪಾಕಿಸ್ತಾನ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಭಾನುವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್ (ಪಿಟಿಐ): ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್‌  ಸೊಹೈಲ್‌ ಮೊಹಮ್ಮದ್‌  ಅವರನ್ನು ಪಾಕಿಸ್ತಾನ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಭಾನುವಾರ ತಿಳಿಸಿದ್ದಾರೆ.

ಪ್ರಧಾನಿ ಇಮ್ರಾನ್‌ ಖಾನ್‌ ಅವರೊಂದಿಗೆ ಚರ್ಚೆ ನಡೆಸಿ ಸೊಹೈಲ್‌ ಅವರ ನೇಮಕದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಖುರೇಷಿ ಮುಲ್ತಾನ್‌ನಲ್ಲಿ ತಿಳಿಸಿದ್ದಾರೆ. 

ಸದ್ಯ ವಿದೇಶಾಂಗ ಕಾರ್ಯದರ್ಶಿಯಾಗಿರುವ ತೆಹಮಿನಾ ಜಂಜುವಾ ಅವರು  ಏ.16 ರಂದು ನಿವೃತ್ತರಾಗಲಿದ್ದಾರೆ. ಮೊಹಮ್ಮದ್‌ ಅವರ ಹುದ್ದೆಗೆ ಯಾರ ನೇಮಕವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.