ಸೈಕಲ್‌ ವಿಶ್ವ ಪರ್ಯಟನೆಯಲ್ಲಿ “ವೇದಾಂಗಿ ಕುಲಕರ್ಣಿ” ದಾಖಲೆ

0
704

ಪುಣೆ ಮೂಲದ 20ರ ತರುಣಿ ವೇದಾಂಗಿ ಕುಲಕರ್ಣಿ ಸೈಕಲ್‌ನಲ್ಲಿ ಕೇವಲ 159 ದಿನಗಳಲ್ಲಿ ವಿಶ್ವ ಪರ್ಯಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಏಷ್ಯಾ ವಲಯದಲ್ಲಿ ದಾಖಲೆ.

ಮುಂಬಯಿ : ಪುಣೆ ಮೂಲದ 20ರ ತರುಣಿ ವೇದಾಂಗಿ ಕುಲಕರ್ಣಿ ಸೈಕಲ್‌ನಲ್ಲಿ ಕೇವಲ 159 ದಿನಗಳಲ್ಲಿ ವಿಶ್ವ ಪರ್ಯಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಏಷ್ಯಾ ವಲಯದಲ್ಲಿ ದಾಖಲೆ. 

ವಿಶ್ವ ಪರ್ಯಟನೆ ಹಾದಿಯಲ್ಲಿ ವೇದಾಂಗಿ 29 ಸಾವಿರ ಕಿ.ಮೀ ದೂರ ಕ್ರಮಿಸಿ ಡಿಸೆಂಬರ್ 23 ರ  ಭಾನುವಾರ ಬೆಳಗ್ಗೆ ರಷ್ಯಾದಿಂದ ಕೋಲ್ಕೊತಾಗೆ ಆಗಮಿಸಿದರು. 

ಈ ವರ್ಷ ಜುಲೈನಲ್ಲಿ ಆಸ್ಪ್ರೇಲಿಯಾದ ಪರ್ತ್‌ನಲ್ಲಿ ಸೈಕಲ್‌ ಏರಿದ್ದ ತರುಣಿ ದಾಖಲೆ ಪೂರ್ಣಗೊಳಿಸಲು ಕೋಲ್ಕೊತಾದಿಂದ ಪರ್ತ್‌ಗೆ ವಾಪಸಾಗಲಿದ್ದಾರೆ. 

ದಿನಕ್ಕೆ 300 ಕಿ.ಮೀ.ನಂತೆ ಸೈಕಲ್‌ ತುಳಿಯುತ್ತಾ 159 ದಿನಗಳಲ್ಲಿ 14 ದೇಶಗಳನ್ನು ಸುತ್ತಿದ್ದೇನೆ. ಈ ಸಂದರ್ಭದಲ್ಲಿ ಉತ್ತಮ ಮತ್ತು ಕೆಟ್ಟ ಅನುಭವಗಳೆರಡೂ ಆಗಿವೆ. ಆದಾಗ್ಯೂ ಏಷ್ಯಾ ವಲಯದಿಂದ ಕಡಿಮೆ ಅವಧಿಯಲ್ಲಿ ವಿಶ್ವ ಪರ್ಯಟನೆ ಮಾಡಿದ ಖುಷಿ ದೊರೆತಿದೆ ಎಂದು ವೇದಾಂಗಿ ಭಾನುವಾರ ಸುದ್ದಿ ಸಂಸ್ಥೆ ಜತೆ ಅನುಭವ ಹಂಚಿಕೊಂಡರು. 

ಸೈಕಲ್‌ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ವಿಶ್ವ ಪರ್ಯಟನೆ ಮಾಡಿದ ವಿಶ್ವ ದಾಖಲೆ ಇಂಗ್ಲೆಂಡ್‌ನ ಸಾಹಸೀ ಮಹಿಳೆ ಜೆನ್ನಿ ಗ್ರಹಾಂ (38 ವರ್ಷ) ಹೆಸರಲ್ಲಿದೆ. ಈಕೆ ಇದೇ ವರ್ಷ ಕೇವಲ 124 ದಿನಗಳಲ್ಲಿ ವಿಶ್ವ ಸುತ್ತಿದ್ದರು.