ಸೇನೆಯ ಕಣ್ಗಾವಲಿಗೆ ನಾಗಾಲ್ಯಾಂಡ್‌

0
507

ಇಡೀ ನಾಗಾಲ್ಯಾಂಡ್ ರಾಜ್ಯವನ್ನು ತೊಂದರೆಗೊಳಗಾದ/ಅಪಾಯಕಾರಿ ಸ್ಥಿತಿಯಲ್ಲಿರುವ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಡಿಸೆಂಬರ್ 30ರಿಂದ ಆರು ತಿಂಗಳವರೆಗೆ ರಾಜ್ಯವು ಸೇನೆಯ ನಿಗಾದಲ್ಲಿ ಇರುತ್ತದೆ.

ನವದೆಹಲಿ (ಪಿಟಿಐ): ಇಡೀ ನಾಗಾಲ್ಯಾಂಡ್ ರಾಜ್ಯವನ್ನು ತೊಂದರೆಗೊಳಗಾದ/ಅಪಾಯಕಾರಿ ಸ್ಥಿತಿಯಲ್ಲಿರುವ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಡಿಸೆಂಬರ್ 30ರಿಂದ ಆರು ತಿಂಗಳವರೆಗೆ ರಾಜ್ಯವು ಸೇನೆಯ ನಿಗಾದಲ್ಲಿ ಇರುತ್ತದೆ.

ರಾಜ್ಯದಲ್ಲಿ ವಿವಾದಾಸ್ಪದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಯಾವ ಜಾಗದಲ್ಲಾದರೂ ಕಾರ್ಯಾಚರಣೆ ನಡೆಸುವ, ಅನುಮತಿಯಿಲ್ಲದೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರವನ್ನು ಭದ್ರತಾ ಪಡೆಗೆ ನೀಡಲಾಗಿದೆ. ರಾಜ್ಯದಲ್ಲಿ ಹತ್ಯೆ ಗಳು, ಲೂಟಿ, ಸುಲಿಗೆ ಪ್ರಕರಣಗಳು ಮುಂದುವರಿದಿದ್ದು, ಜನರ ಹಕ್ಕುಗಳ ರಕ್ಷಣೆಗಾಗಿ ಸೇನೆಯ ಮಧ್ಯಪ್ರವೇಶ ಅಗತ್ಯ ಎಂದು ಗೃಹಸಚಿವಾಲಯವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. 

ನಾಗಾಲ್ಯಾಂಡ್‌,ಜಮ್ಮು–ಕಾಶ್ಮೀರ ದಲ್ಲಿ ಜಾರಿಯಲ್ಲಿರುವ ವಿಶೇಷಾಧಿಕಾರ ಕಾಯ್ದೆಯಡಿ ಸೇನೆಯು ಅಧಿಕಾರವನ್ನು ಚಲಾಯಿಸುತ್ತದೆ ಎಂಬ ಆರೋಪಗಳಿವೆ.