ಸೇನೆಗೆ 72 ಸಾವಿರ ಅಸಾಲ್ಟ್​ ರೈಫಲ್​ ಖರೀದಿ: ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ

0
760

ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿರುವ ರಕ್ಷಣಾ ಸಚಿವಾಲಯ ಅಮೆರಿಕದಿಂದ 72,400 ಅತ್ಯಾಧುನಿಕ ಅಸಾಲ್ಟ್​ (ಸಿಗ್​ ಸಾಯರ್​) ರೈಫಲ್​ ಅನ್ನು ತ್ವರಿತವಾಗಿ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ: ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿರುವ ರಕ್ಷಣಾ ಸಚಿವಾಲಯ ಅಮೆರಿಕದಿಂದ 72,400 ಅತ್ಯಾಧುನಿಕ ಅಸಾಲ್ಟ್​ (ಸಿಗ್​ ಸಾಯರ್​) ರೈಫಲ್​ ಅನ್ನು ತ್ವರಿತವಾಗಿ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ನೇತೃತ್ವದ ರಕ್ಷಣಾ ಸ್ವಾಧೀನ ಸಮಿತಿ ರೈಫಲ್​ಗಳನ್ನು ಖರೀದಿಸಲು ಒಪ್ಪಿಗೆ ಸೂಚಿಸಿತ್ತು. 3,600 ಕಿ.ಮೀ. ಉದ್ದದ ಚೀನಾ ಗಡಿಯ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಇನ್ಸಾಸ್​ ರೈಫಲ್​ ಬದಲು ಅಮೆರಿಕದ ಸಿಗ್ ಸಾಯರ್ ರೈಫಲ್​ಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದವು.

700 ಕೋಟಿ ರೂ. ವೆಚ್ಚದಲ್ಲಿ ರೈಫಲ್​ಗಳನ್ನು ಖರೀದಿಸಲಾಗುತ್ತಿದೆ. ಕಂಪನಿ ಒಂದು ವರ್ಷದಲ್ಲಿ ಈ ಸಿಗ್ ಸಾಯರ್ ರೈಫಲ್​ಗಳನ್ನು ಸರಬರಾಜು ಮಾಡಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ತಾಂತ್ರಿಕತೆಯನ್ನು ಬಳಸಿ ಈ ರೈಫಲ್​ಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ವಿಧದ ವಾತಾವರಣದಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕ ಸೈನಿಕರು ಈ ರೈಫಲ್​ ಬಳಸುತ್ತಿದ್ದಾರೆ. ಯೂರೋಪ್​ನ ಹಲವು ರಾಷ್ಟ್ರಗಳ ಸೈನಿಕರೂ ಸಿಗ್​ ಸಾಯರ್​ ರೈಫಲ್​ ಬಳಸುತ್ತಿದ್ದಾರೆ. (ಏಜೆನ್ಸೀಸ್​)