ಸೇನೆಗೆ ಹೊಸ ಫಿರಂಗಿ ವ್ಯವಸ್ಥೆ

0
238

ಸೇನೆಗೆ ಮೂರು ಪ್ರಮುಖ ಫಿರಂಗಿ‌ಗಳನ್ನು ಒಳಗೊಂಡ ವ್ಯವಸ್ಥೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನವೆಂಬರ್ 9 ರ ಶುಕ್ರವಾರ ಸೇರ್ಪಡೆ ಮಾಡಿದರು.

ಡಿಯೊಲಾಲಿ (ಮಹಾರಾಷ್ಟ್ರ) (ಪಿಟಿಐ): ಸೇನೆಗೆ ಮೂರು ಪ್ರಮುಖ ಫಿರಂಗಿ‌ಗಳನ್ನು ಒಳಗೊಂಡ ವ್ಯವಸ್ಥೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನವೆಂಬರ್ 9 ರ  ಶುಕ್ರವಾರ ಸೇರ್ಪಡೆ ಮಾಡಿದರು.

ಈ ಮೂಲಕ, ಅಮೆರಿಕದ ಎಂ.777 ಅತಿ ಲಘು ಹೊವಿಟ್ಜರ್‌ ಫಿರಂಗಿ, ಕೆ–9 ವಜ್ರ ಸ್ವಯಂಚಾಲಿತ ಫಿರಂಗಿ ಮತ್ತು ಫಿರಂಗಿ ಸಾಗಾಟ ವಾಹನವು ಭಾರತೀಯ ಸೇನೆಯ ಸೇವೆಗೆ ಲಭ್ಯವಾಗಲಿವೆ.

ಎಂ.777 ಶ್ರೇಣಿಯ 145 ಹೊವಿಟ್ಜರ್‌ ಫಿರಂಗಿಗಳನ್ನು ಹೊಂದಲು 2016ರ ನವೆಂಬರ್‌ನಲ್ಲಿ ಅಮೆರಿಕ ಸರ್ಕಾರದ ಜತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ವಿದೇಶಿ ಸೇನಾ ಸಲಕರಣೆ ಮಾರಾಟ ಕಾರ್ಯಕ್ರಮದಡಿ ಇದಕ್ಕಾಗಿ 5,070 ಕೋಟಿ ವ್ಯಯಿಸಲಾಗುತ್ತದೆ.

ಎಂ.777 ಅನ್ನು ಇರಾಕ್‌ ಮತ್ತು ಅಫ್ಗಾನಿಸ್ತಾನದ ಸೇನಾ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ.ಹೆಲಿಕಾಪ್ಟರ್ ಮೂಲಕ ಎತ್ತರದ ಸ್ಥಳಗಳಿಗೆ ಇವನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ.