ಸೇನಾ ತರಬೇತಿ ಪಡೆಯಲು “ಮಹೇಂದ್ರ ಸಿಂಗ್​ ಧೋನಿ”ಗೆ ಅನುಮತಿ ​

0
50

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಗೌರವ ಲೆಫ್ಟಿನೆಂಟ್​ ಕರ್ನಲ್​ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಭಾರತೀಯ ಸೇನಾಪಡೆಯಲ್ಲಿ ಸೇನಾ ತರಬೇತಿ ಪಡೆಯಲು ಸೇನಾಪಡೆ ಮುಖ್ಯಸ್ಥ ಬಿಪಿನ್​ ರಾವತ್​ ಅನುಮತಿ ನೀಡಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಗೌರವ ಲೆಫ್ಟಿನೆಂಟ್​ ಕರ್ನಲ್​ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಭಾರತೀಯ ಸೇನಾಪಡೆಯಲ್ಲಿ ಸೇನಾ ತರಬೇತಿ ಪಡೆಯಲು ಸೇನಾಪಡೆ ಮುಖ್ಯಸ್ಥ ಬಿಪಿನ್​ ರಾವತ್​ ಅನುಮತಿ ನೀಡಿದ್ದಾರೆ. ಪ್ಯಾರಾಚೂಟ್​ ರೆಜಿಮೆಂಟ್​ ಬೆಟಾಲಿಯನ್​ನಲ್ಲಿ ಧೋನಿ ತರಬೇತಿ ಪಡೆಯಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಧೋನಿ ತರಬೇತಿ ಪಡೆಯಲಿದ್ದಾರೆ. ಆದರೆ ತರಬೇತಿಯ ಬಳಿಕ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಸೇನಾಪಡೆ ಮೂಲಗಳು ಸ್ಪಷ್ಟಪಡಿಸಿವೆ.

ಕ್ರಿಕೆಟ್​ ವಿಶ್ವಕಪ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಮಹೇಂದ್ರ ಸಿಂಗ್​ ಧೋನಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಇದರ ಮಧ್ಯೆ ತಾವು ಸೇನಾ ತರಬೇತಿಗೆ ತೆರಳಲು ಬಯಸಿರುವುದರಿಂದ, 2 ತಿಂಗಳು ತಮ್ಮನ್ನು ತಂಡದ ಆಯ್ಕೆಗೆ ಪರಿಗಣಿಸಬಾರದು ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿಕೊಂಡಿದ್ದರು. ಇದರಿಂದಾಗಿ ವೆಸ್ಟ್​ ಇಂಡೀಸ್​ ಪ್ರವಾಸಕ್ಕಾಗಿ ಭಾರತ ತಂಡವನ್ನು ಆಯ್ಕೆ ಮಾಡಲು ಭಾನುವಾರ ಸಭೆ ಸೇರಿದ್ದ ಬಿಸಿಸಿಐನ ಆಯ್ಕೆ ಸಮಿತಿ ಧೋನಿ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. (ಏಜೆನ್ಸೀಸ್​)