ಸೆಪ್ಟೆಂಬರ್ 8: ಅಂತರರಾಷ್ಟ್ರೀಯ ಸಾಕ್ಷರತಾ ದಿನ.

0
104

ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ.. ಜನರು ಮತ್ತು ಸಮಾಜಕ್ಕೆ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳಲು ಪ್ರತಿವರ್ಷವೂ ಈ ದಿನ ಆಚರಿಸಲಾಗುತ್ತದೆ.

ಅಕ್ಷರ ಜ್ಞಾನ/ಸಾಕ್ಷರತೆ ಜನರ ಬದುಕಿನ ಮುಖ್ಯ ಭಾಗ. ಅಕ್ಷರಗಳ ಪರಿಚಯವಾದಾಗ ನಮ್ಮ ಓದು ಮುಂದೆ ಸಾಗುತ್ತದೆ. ಮುಂದಿನ ಓದಿಗೆ ಈ ಅಕ್ಷರಗಳೆ ಬುನಾದಿ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 8ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುತ್ತಿದೆ.

ವಿಶೇಷತೆ:-

ಸೆಪ್ಟೆಂಬರ್ 8ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ. ಜನರು ಮತ್ತು ಸಮಾಜಕ್ಕೆ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳಲು ಪ್ರತಿವರ್ಷವೂ ಈ ದಿನ ಆಚರಿಸಲಾಗುತ್ತದೆ.

“ಡಿಜಿಟಲ್ ಜಗತ್ತಿನಲ್ಲಿ ಸಾಕ್ಷರತೆ (‘ಲಿಟ್ರಸಿ ಇನ್‌ ಡಿಜಿಟಲ್‌ ವರ್ಲ್ಡ್‘)” ಎಂಬ 2017 ರ ಘೋಷ ವಾಕ್ಯ ಒಳಗೊಂಡ ಚಿತ್ರವೊಂದನ್ನು ಆಲ್ ಇಂಡಿಯಾ ರೇಡಿಯೊ ಟ್ವೀಟ್‌ ಮಾಡಿತು.

ಹಿನ್ನೆಲೆ:-

ನವೆಂಬರ್ 1966 ರಲ್ಲಿ 14 ನೇ ಅಧಿವೇಶನದಲ್ಲಿ UNESCO ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವಾಗಿ ಘೋಷಿಸಲ್ಪಟ್ಟಿತು. ಅಂದಿನಿಂದ, ಸದಸ್ಯ ರಾಷ್ಟ್ರಗಳು ಬಹುತೇಕವಾಗಿ ಪ್ರತಿ ವರ್ಷ “ಅಂತರರಾಷ್ಟ್ರೀಯ ಸಾಕ್ಷರತಾ ದಿನ” ವನ್ನು ಆಚರಿಸಲಾಗುತ್ತಿದೆ. ಈ ದಿನ 1965 ರಲ್ಲಿ, ವಿಶ್ವ ಮಟ್ಟದಲ್ಲಿ ಶಿಕ್ಷಣದ ಕಾರ್ಯಕ್ರಮವನ್ನು ಚರ್ಚಿಸಲು ಮೊದಲ ಬಾರಿಗೆ ಟೆಕ್ರಾನ್ನಲ್ಲಿ ವಿಶ್ವ ಮಂತ್ರಿಯ ಶಿಕ್ಷಣ ಸಚಿವರು ಭೇಟಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷರತೆಯ ಬಗ್ಗೆ ಚರ್ಚಿಸಿದ್ದರು.

ಕಂಪ್ಯೂಟರ್‌, ಡಿಜಿಟಲ್‌ ಮೊಬೈಲ್‌ಗಳ ಬಳಕೆ ಕುರಿತ ಹಾಗೂ ಅವುಗಳ ಬಗೆಗಿನ ಜ್ಞಾನ/ಸಾಕ್ಷರತೆಯ ಇಂದಿನ ಅಗತ್ಯತೆಗಳನ್ನು ಈ ಚಿತ್ರ ಬಿಂಬಿಸಿದೆ.