ಸೆಪ್ಟೆಂಬರ್ 23 ರ ಟೆನಿಸ್‌ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
13

ಈ ಕೆಳಗೆ ಟೆನಿಸ್‌ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿ:ಒಸಾಕಗೆ ಪ್ರಶಸ್ತಿ

ಟೋಕಿಯೊ (ರಾಯಿಟರ್ಸ್): ಜಪಾನ್‌ನ ನವೊಮಿ ಒಸಾಕ, ಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 22 ರ  ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಎದುರು 6–2, 6–3 ಸೆಟ್‌ಗಳಿಂದ ಜಯ ಸಾಧಿಸಿದರು. ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಬಳಿಕ ಒಸಾಕ ಈ ವರ್ಷ ಗಳಿಸಿದ ಮೊದಲ ಪ್ರಶಸ್ತಿ ಇದು.

ಇಲ್ಲಿ ಅವರು ಟ್ರೋಫಿ ಗೆಲ್ಲುವುದರೊಂದಿಗೆ ಲಯಕ್ಕೆ ಮರಳಿದರು. 24 ವರ್ಷಗಳ ಬಳಿಕ ಪಾನ್‌ ಪೆಸಿಫಿಕ್‌ ಓಪನ್‌ ಪ್ರಶಸ್ತಿ ಗೆದ್ದ ಜಪಾನ್‌ ಆಟಗಾರ್ತಿ ಎನಿಸಿಕೊಂಡರು. 1995ರಲ್ಲಿ ಕಿಮಿಕೊ ಡಾಟೆ ಇಲ್ಲಿ ಚಾಂಪಿಯನ್‌ ಆಗಿದ್ದರು.ಶಕ್ತಿಶಾಲಿ ಸರ್ವ್‌ಗಳ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ಒಸಾಕಾ, ವಿಶ್ವದ 41ನೇ ರ‍್ಯಾಂಕಿನ ಆಟಗಾರ್ತಿಯ ಎದುರು ಪಾರಮ್ಯ ಮೆರೆದರು.

 

ಕ್ಯಾರೊಲಿನ್ ಮರಿನ್​ಗೆ ಚೀನಾ ಓಪನ್ ಕಿರೀಟ

ಶಾಂಘೈ: ಗಾಯದ ಸಮಸ್ಯೆಯಿಂದಾಗಿ ಕಳೆದ 8 ತಿಂಗಳಿಂದ ಹೊರಗುಳಿದಿದ್ದ 3 ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್ ತಾರೆ ಕ್ಯಾರೊಲಿನ್ ಮರಿನ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ಇದರೊಂದಿಗೆ 2016ರ ರಿಯೋ ಒಲಿಂಪಿಕ್ ಚಾಂಪಿಯನ್ ಭರ್ಜರಿಯಾಗಿ ರೀಎಂಟ್ರಿ ಕೊಟ್ಟಿದ್ದಾರೆ.

ಸೆಪ್ಟೆಂಬರ್ 22 ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮರಿನ್ 14-21, 21-17, 21-18 ಗೇಮ್ ಗಳಿಂದ ಎರಡನೇ ಶ್ರೇಯಾಂಕಿತ ಆಟಗಾರ್ತಿ ತೈವಾನ್​ನ ತೈ ಜು ಯಿಂಗ್ ಅವರನ್ನು 65 ನಿಮಿಷಗಳ ಹೋರಾಟದಲ್ಲಿ ಸೋಲಿಸಿದರು. ‘ಕಳೆದ ಜನವರಿಯಿಂದ ಬ್ಯಾಡ್ಮಿಂಟನ್​ನಿಂದ ಹೊರಗಿದ್ದೆ. ಇದೀಗ ವಾಪಸಾದ ಮೊದಲ ಟೂರ್ನಿಯಲ್ಲೇ ಚಾಂಪಿಯನ್ ಆಗಿರುವುದು ಖುಷಿ ನೀಡಿದೆ’ ಎಂದು ಕಣ್ಣೀರು ಹಾಕುತ್ತಲೇ 26 ವರ್ಷದ ಮರಿನ್ ಹೇಳಿದರು.