ಸೆನೆಗಲ್ ಗೆ ಇ-ಆಟೋರಿಕ್ಷಾ ಹಸ್ತಾಂತರಿಸಿದ ಭಾರತ

0
304

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆನೆಗಲ್ ರಾಯಬಾರಿ ಇ.ಎಲ್ ಹಡ್ಜಿ ಇಬೊ ಬೂಯೆ ಅವರಿಗೆ ಎರಡು ಇ-ಆಟೋರಿಕ್ಷಾಗಳನ್ನು ಹಸ್ತಾಂತರಿಸಿದರು.

ನವದೆಹಲಿ(ಪಿಟಿಐ) : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆನೆಗಲ್  ರಾಯಬಾರಿ ಇ.ಎಲ್ ಹಡ್ಜಿ ಇಬೊ ಬೂಯೆ ಅವರಿಗೆ ಎರಡು ಇ-ಆಟೋರಿಕ್ಷಾಗಳನ್ನು ಹಸ್ತಾಂತರಿಸಿದರು. 

ಸೆನೆಗಲ್ ಅಧ್ಯಕ್ಷ ಮಾಕ್ಸಿಸಲ್ ಅವರು ಪ್ರಧಾನಿ ಮೋದಿ ಅವರಿಗೆ ಮಾಡಿದ್ದ ಮನವಿಗೆ ಸ್ಪಂದಿಸಿ, ಲಿಥಿಯಂ-ಆಯಾನ್ ಬ್ಯಾಟರಿಗಳನ್ನು ಒಳಗೊಂಡ 250 ಇ-ಆಟೋರಿಕ್ಷಾಗಳನ್ನು ನೀಡಲಾಗುತ್ತಿದೆ. ಇದು ನಗರ ಪ್ರದೇಶದ ಸಾರಿಗೆ ವ್ಯವಸ್ಥೆಯಲ್ಲಿ ಶುದ್ದ ವಾತಾವರಣ ಕಲ್ಪಿಸಲು ನೆರವಾಗಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದ.

ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸೆನೆಗಲ್  ರಾಯಬಾರಿ ಇ.ಎಲ್ ಹಡ್ಜಿ ಇಬೊ ಬೂಯೆ  ಇ-ಆಟೋರಿಕ್ಷಾದಲ್ಲಿ ಸವಾರಿ ನಡೆಸಿದರು.