ಸೂಪರ್ ಅರ್ಥ್ ಪತ್ತೆ: ಬರ್ನಾರ್ಡ್ಸ್ ಸ್ಟಾರ್ ಬಿ ಎಂದು ನಾಮಕರಣ

0
595

ಸೂರ್ಯನಿಂದ ಆರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಅತಿ ಶೀತಮಯ ವಾತಾವರಣದ ಮತ್ತೊಂದು ಭೂಮಿ (ಸೂಪರ್ ಅರ್ಥ್) ಪತ್ತೆಯಾಗಿದೆ. ವೈಜ್ಞಾನಿಕ ಜರ್ನಲ್ ನೇಚರ್​ನಲ್ಲಿ ಪ್ರಕಟವಾಗಿರುವ ವರದಿಯಂತೆ ಸದ್ಯಕ್ಕೆ ಈ ಗ್ರಹವನ್ನು ‘ಜಿಜೆ 699 ಅಥವಾ ಬರ್ನಾರ್ಡ್ಸ್ ಸ್ಟಾರ್ ಬಿ’ ಎಂದು ಹೆಸರಿಸಲಾಗಿದೆ.

ಪ್ಯಾರಿಸ್: ಸೂರ್ಯನಿಂದ ಆರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಅತಿ ಶೀತಮಯ ವಾತಾವರಣದ ಮತ್ತೊಂದು ಭೂಮಿ (ಸೂಪರ್ ಅರ್ಥ್) ಪತ್ತೆಯಾಗಿದೆ. ವೈಜ್ಞಾನಿಕ ಜರ್ನಲ್ ನೇಚರ್​ನಲ್ಲಿ ಪ್ರಕಟವಾಗಿರುವ ವರದಿಯಂತೆ ಸದ್ಯಕ್ಕೆ ಈ ಗ್ರಹವನ್ನು ‘ಜಿಜೆ 699 ಅಥವಾ ಬರ್ನಾರ್ಡ್ಸ್ ಸ್ಟಾರ್ ಬಿ’ ಎಂದು ಹೆಸರಿಸಲಾಗಿದೆ.

ಭೂಮಿಗಿಂತ 3.2 ಪಟ್ಟು ತೂಕವಿರುವ ಈ ಗ್ರಹ, ಮೈನಸ್ 170 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದೆ. 233 ದಿನಗಳಿಗೊಮ್ಮೆ ಸೂರ್ಯನ ಹತ್ತಿರದ ಏಕೈಕ ನಕ್ಷತ್ರವೊಂದರ ಸುತ್ತ ಪರ್ಯಟನೆಯನ್ನು ಸೂಪರ್ ಅರ್ಥ್ ಪೂರ್ಣಗೊಳಿಸುತ್ತದೆ ಎಂದು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದಕ್ಕಾಗಿ ಅವರು 20 ವರ್ಷ ಅಧ್ಯಯನ ನಡೆಸಿದ್ದರು ಎನ್ನಲಾಗಿದೆ.

ಪತ್ತೆ ಮಾಡಿದ್ದು ಹೀಗೆ…

ಒಂದು ಗ್ರಹಚಲನೆಯ ವೇಗ, ತೂಕವನ್ನು ಪತ್ತೆ ಮಾಡಲು ಖಗೋಳ ವಿಜ್ಞಾನಿಗಳು ಡಾಪ್ಲರ್ ಎಫೆಕ್ಟ್ ಎಂಬ ಪ್ರಕ್ರಿಯೆಯನ್ನು ಬಳಸುತ್ತಾರೆ. ತನ್ನ ನಕ್ಷತ್ರದ ಮೇಲೆ ಗ್ರಹವೊಂದು ಹೊಂದಿರುವ ಗುರುತ್ವಾಕರ್ಷಣ ಶಕ್ತಿಯ ಪರಿಣಾಮವನ್ನು ಈ ಪ್ರಕ್ರಿಯೆಯಲ್ಲಿ ಪರಿಶೀಲಿಸಲಾಗುತ್ತದೆ. ಜರ್ಮನಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸ್​ರ್ವೆಟರಿ, ಲಂಡನ್ ಕ್ವೀನ್ ಮೇರಿ ವಿವಿಯ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆ ನಡೆಸಿ ಸೂಪರ್ ಅರ್ಥ್ ಪತ್ತೆ ಮಾಡಿದ್ದಾರೆ.

‘ಮಿನಿ ನೆಪ್ಚೂನ್​’ ಎನ್ನಬಹುದು

ಗಂಟೆಗೆ 5 ಲಕ್ಷ ಕಿ.ಮೀ. ವೇಗದಲ್ಲಿ ಬಾಹ್ಯಾಕಾಶದಲ್ಲಿ ಬರ್ನಾರ್ಡ್ಸ್ ಸ್ಟಾರ್ ಚಲಿಸುತ್ತಿದೆಯಂತೆ. ಹೊಸ ಗ್ರಹ ‘ ಸೂಪರ್ ಅರ್ಥ್’ ನಲ್ಲಿ ನೆಪ್ಚೂನ್ ಮಾದರಿ ಅನಿಲ ತುಂಬಿಕೊಂಡಿರಬಹುದು. ಅತಿ ಶೀತಮಯ ವಾತಾವರಣ ಇರುವ ಇದರಲ್ಲಿ ವಾಸ ಕಷ್ಟವಾದರೂ, ಈ ಗ್ರಹ ನಮಗೆ ಅತಿ ಸಮೀಪದಲ್ಲಿರುವುದು ವಿಶೇಷ ಎಂದು ವಿಜ್ಞಾನಿ ರಿಬಾಸ್ ಅಭಿಪ್ರಾಯಪಟ್ಟಿದ್ದಾರೆ. 2016ರಲ್ಲಿ ಭೂಮಿಗೆ ಕೇವಲ 4 ಬೆಳಕಿನ ವರ್ಷ ಹತ್ತಿರವಿರುವ ಗ್ರಹವೊಂದು ಪತ್ತೆಯಾಗಿತ್ತು. ಆಲ್ಪಾ ಸೆಂಚುರಿ ಸಿಸ್ಟಂನಲ್ಲಿನ ಒಂದು ನಕ್ಷತ್ರ ಪುಂಜವನ್ನು ಇದು ಸುತ್ತುತ್ತಿರುವುದಾಗಿ ತಿಳಿದುಬಂದಿತ್ತು.