“ಸುಭಾಷ್‌ಚಂದ್ರ ಗರ್ಗ್” ನೂತನ ಹಣಕಾಸು ಕಾರ್ಯದರ್ಶಿಯಾಗಿ ನೇಮಕ

0
811

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ (58) ಅವರನ್ನು ಕೇಂದ್ರದ ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ನವದೆಹಲಿ (ಪಿಟಿಐ): ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ (58) ಅವರನ್ನು ಕೇಂದ್ರದ ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಗರ್ಗ್‌ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.  1983ರ ಐಎಎಸ್‌ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಗರ್ಗ್‌ ಅವರು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ 2017ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
 
ಸುಭಾಷ್‌ಚಂದ್ರ ಗರ್ಗ್‌ ಅವರು ಬಿ.ಕಾಂ ಪದವಿ ಮತ್ತು ಎಲ್.ಎಲ್.ಬಿ ಕಾನೂನು ಪದವಿ ಶಿಕ್ಷಣವನ್ನು ರಾಜಸ್ಥಾನದ ಅಜ್ಮೀರ್ ನ ಸರ್ಕಾರಿ ಕಾಲೇಜಿನಲ್ಲಿ ಪಡೆದಿರುವರು
 
ಭಾರತದ 1 ರೂ ಕರೆನ್ಸಿ ನೋಟಿನ ಮೇಲೆ ಕೇಂದ್ರ ಹಣಕಾಸು ಕಾರ್ಯದರ್ಶಿಯ ಸಹಿಯು ಇರುತ್ತದೆ.