ಸುಬ್ರಮಣಿಯಂಗೆ ‘ಸಾಮಗಾನ ಮಾತಂಗ’ ಪ್ರಶಸ್ತಿ

0
29

ಅಂತರರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕ ಡಾ.ಎಲ್‌.ಸುಬ್ರಮಣಿಯಂ ಅವರಿಗೆ ಭಾರತೀಯ ಸಾಮಗಾನ ಸಭಾದ ‘8ನೇ ಸಾಮಗಾನ ಮಾತಂಗ ಪ್ರಶಸ್ತಿ’ ಲಭಿಸಿದೆ.

ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 2018ರ ಜನವರಿ 21ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿರುವ ಸಭಾದ 9ನೇ ಸಂಗೀತ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತೀಯ ಸಾಮಗಾನ ಸಭಾ ಸ್ಥಾಪಕ ಅಧ್ಯಕ್ಷ ಆರ್‌.ಆರ್‌.ರವಿಶಂಕರ್‌ ತಿಳಿಸಿದ್ದಾರೆ.

ಸುಬ್ರಮಣಿಯಂ ಅವರು ಭಾರತೀಯ ಸಂಗೀತವಷ್ಟೇ ಅಲ್ಲ, ಪಾಶ್ಚಾತ್ಯ ಸಂಗೀತದಲ್ಲೂ ಪರಿಣತರು. ಕರ್ನಾಟಕ ಸಂಗೀತವನ್ನು ವಿಶ್ವದ ಮೂಲೆಮೂಲೆಗೆ ಕೊಂಡೊಯ್ದ ಸಾಧಕ. ಪ್ರತಿಭಾವಂತ ಸಂಗೀತ ಸಂಯೋಜಕ, ಅಂತರರಾಷ್ಟ್ರೀಯಮಟ್ಟದ ಸ್ವರ ಸಾಧಕರಾಗಿ ಸಂಗೀತ ಲೋಕದ ಗಮನ ಸೆಳೆದಿದ್ದಾರೆ.

ರಾಯಲ್‌ ಆಲ್ಬರ್ಟ್‌ ಹಾಲ್‌, ಲಿಂಕನ್‌ ಸೆಂಟರ್ ಕೆನಡಿ, ಚಿಕಾಗೋಸ್‌ ಮಿಲೇನಿಯಂ ಪಾರ್ಕ್‌ ಹಾಗೂ ಬೀಜಿಂಗ್‌ ನ್ಯಾಷನಲ್‌ ಸೆಂಟರ್‌ ಸೇರಿ ವಿಶ್ವದ ಹಲವು ಪ್ರಮುಖ ಸ್ಥಳಗಳಲ್ಲಿ ಅವರು ಸ್ಥಾಪಿಸಿರುವ ಸಂಗೀತ ಕೇಂದ್ರಗಳು ಇಂದಿಗೂ ಸಕ್ರಿಯವಾಗಿವೆ.