ಸುಪ್ರೀಂಕೋರ್ಟ್ ನ 47 ನೇ ಮುಖ್ಯನ್ಯಾಯಮೂರ್ತಿಯಾಗಿ “ಶರದ್‌ ಅರವಿಂದ್‌ ಬೊಬಡೆ” ಅವರಿಂದ ಪ್ರಮಾಣವಚನ ಸ್ವೀಕಾರ

0
24

ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್‌ ಅರವಿಂದ್‌ ಬೊಬಡೆ (63) ಅವರು ನವೆಂಬರ್ 18 ರ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್‌ ಅರವಿಂದ್‌ ಬೊಬಡೆ (63) ಅವರು  ನವೆಂಬರ್ 18 ರ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೇವಾ ಹಿರಿತನ ಆಧರಿಸಿ ನಿಯೋಜನೆಗೊಂಡಿರುವ ಬೊಬಡೆ ಅವರ ಅಧಿಕಾರಾವಧಿ 17 ತಿಂಗಳಾಗಿದ್ದು, 2021ರ ಏಪ್ರಿಲ್‌ 23ಕ್ಕೆ ನಿವೃತ್ತರಾಗಲಿದ್ದಾರೆ. ಭಾನುವಾರವಷ್ಟೇ ನಿವೃತ್ತಿಯಾದ ನಿಕಟಪೂರ್ವ ಸಿಜೆಐ ರಂಜನ್‌ ಗೊಗೊಯಿ ಅವರು ಬೊಬಡೆ ಹೆಸರನ್ನು ಶಿಫಾರಸು ಮಾಡಿದ್ದರು.

ನ್ಯಾಯಮೂರ್ತಿಗಳ ಕೊರತೆ ನೀಗಿಸುವ ಹಾಗೂ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗೊಗೊಯಿ ಅವರು ಕೈಗೊಂಡ ಕ್ರಮಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಾಗಿ ಬೊಬಡೆ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಮೂರ್ತಿ ಬೊಬಡೆಯವರ ಐತಿಹಾಸಿಕ ತೀರ್ಪುಗಳು: ಕಳೆದ ವಾರವಷ್ಟೇ ಪ್ರಕಟವಾದ ಶತಮಾನಗಳ ಅಯೋಧ್ಯೆ ವಿವಾದ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದಲ್ಲಿ ಜಸ್ಟೀಸ್ ಬೊಬಡೆಯವರು ಕೂಡ ಭಾಗವಾಗಿದ್ದರು. 2017ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ವ್ಯಕ್ತಿಯ ಖಾಸಗಿತನದ ಹಕ್ಕು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿದೆ ಎಂದು ಎತ್ತಿಹಿಡಿದಿದ್ದರು.

ವಕೀಲ ಕುಟುಂಬ ಹಿನ್ನಲೆಯಿಂದ ಬಂದ ಜಸ್ಟೀಸ್ ಬೊಬಡೆ ಮಹಾರಾಷ್ಟ್ರ ಮೂಲದವರು. ಇಲ್ಲಿನ ನಾಗ್ಪುರದಲ್ಲಿ 1956ರ ಏಪ್ರಿಲ್ 24ರಂದು ಜನಿಸಿದ ನ್ಯಾ.ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಎಲ್ ಎಲ್ ಬಿಯಲ್ಲಿ ಪದವಿ ಪೂರೈಸಿದರು. 1978ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್ ನ ಅಡ್ವೊಕೇಟ್ ಕೂಡ ಆಗಿದ್ದರು. ಖ್ಯಾತ ಹಿರಿಯ ವಕೀಲ ಅಡ್ವೊಕೇಟ್ ಅರವಿಂದ್ ಶ್ರೀನಿವಾಸ್ ಬೊಬಡೆಯವರ ಮಗ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ 2013ರ ಏಪ್ರಿಲ್ 12ರಂದು ಬಡ್ತಿ ಹೊಂದಿದ್ದರು. ಸೇವಾ ಹಿರಿತನದ ಪ್ರಕಾರ ಜಸ್ಟೀಸ್ ಬೊಬಡೆ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದು ಪೂರ್ವಾಧಿಕಾರಿ ನ್ಯಾಯಮೂರ್ತಿ ಗೊಗೊಯ್ ಅವರು ಬೊಬ್ಡೆಯವರ ಹೆಸರು ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಹಿಂದಿನ ಸಿಜೆಐ ಗೊಗೊಯ್ ಅವರಿಗೆ ಲೈಂಗಿಕ ಕಿರುಕುಳ ಕೇಸಿನಲ್ಲಿ ಕ್ಲೀನ್ ಚಿಟ್ ನೀಡಿದ್ದ ಮೂವರು ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿಯಲ್ಲಿ ಜಸ್ಟೀಸ್ ಬೊಬಡೆ ಕೂಡ ಇದ್ದರು. ಆಧಾರ್ ಕಾರ್ಡು ಹೊಂದಿರದ ನಾಗರಿಕರಿಗೆ ಸರ್ಕಾರಿ ಸೇವೆಗಳು ಮತ್ತು ಮೂಲಭೂತ ಸೇವೆಗಳನ್ನು ನಿರಾಕರಿಸಬಾರದು ಎಂದು 2015ರಲ್ಲಿ ತೀರ್ಪು ನೀಡಿದ್ದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದಲ್ಲಿ ಕೂಡ ಜಸ್ಟೀಸ್ ಬೊಬಡೆಯವರಿದ್ದರು.