ಸುಪ್ರೀಂ ಕೋರ್ಟ್​ಗೆ ನಾಲ್ವರು ನ್ಯಾಯಮೂರ್ತಿಗಳ ಬಡ್ತಿ

0
307

ಸುಪ್ರೀಂ ಕೋರ್ಟ್​ಗೆ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳು ಬಡ್ತಿ ಪಡೆದಿದ್ದು, ನವೆಂಬರ್ 2 ರ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿವಿಧ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಹೇಮಂತ್ ಗುಪ್ತಾ, ಆರ್. ಸುಭಾಷ್ ರೆಡ್ಡಿ, ಎಂ.ಆರ್. ಷಾ ಹಾಗೂ ಅಜಯ್ ರುಸ್ತೋಗಿ ಅವರಿಗೆ ಬಡ್ತಿ ನೀಡಲಾಗಿದೆ.

ನವದೆಹಲಿ: ಸುಪ್ರೀಂ ಕೋರ್ಟ್​ಗೆ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳು ಬಡ್ತಿ ಪಡೆದಿದ್ದು, ನವೆಂಬರ್ 2 ರ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಿವಿಧ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಹೇಮಂತ್ ಗುಪ್ತಾ, ಆರ್. ಸುಭಾಷ್ ರೆಡ್ಡಿ, ಎಂ.ಆರ್. ಷಾ ಹಾಗೂ ಅಜಯ್ ರುಸ್ತೋಗಿ ಅವರಿಗೆ ಬಡ್ತಿ ನೀಡಲಾಗಿದೆ. ಈ ನಾಲ್ವರ ಬಡ್ತಿಗಾಗಿ 3 ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ವೇಗದಲ್ಲಿ ಕೊಲಿಜಿಯಂ ಶಿಫಾರಸಿಗೆ ಸಮ್ಮತಿ ದೊರೆತಿರುವುದು ಇದೇ ಮೊದಲು. ಈ ನೇಮಕದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿದೆ. ಇನ್ನೂ 3 ಹುದ್ದೆ ಖಾಲಿಯಿವೆ.

ಏತನ್ಮಧ್ಯೆ ಗುಜರಾತ್ ಹೈಕೋರ್ಟ್​ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡುವ ವಿಚಾರದಲ್ಲಿ ಗೊಂದಲ ನಿರ್ವಣವಾಗಿತ್ತು. ನ್ಯಾ.ಎ.ಎಸ್. ದಾವೆ ಅವರನ್ನು ಹಂಗಾಮಿ ಸಿಜೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವಕೀಲರ ಪ್ರತಿಭಟನೆಯ ಬಳಿಕ ನ್ಯಾ.ಜೆ. ಅಖಿಲ್ ಖುರೇಷಿ ಅವರನ್ನು ಪ್ರಭಾರ ಸಿಜೆ ಆಗಿ ನೇಮಿಸಿದೆ.