ಸುಡಾನ್ ನ ಚೊಚ್ಚಲ ಉಪಗ್ರಹ ಉಡಾವಣೆ ಮಾಡಿದ ಚೀನಾ

0
13

ತನ್ನ ರಾಷ್ಟ್ರದ ಮೊಟ್ಟಮೊದಲ ಉಪಗ್ರಹವನ್ನು ಚೀನಾ ಉಡಾವಣೆ ಮಾಡಿರುವುದಾಗಿ ಈಶಾನ್ಯ ಆಫ್ರಿಕಾದ ಸುಡಾನ್ ನವೆಂಬರ್ 5 ರ ಮಂಗಳವಾರ ಹೇಳಿಕೊಂಡಿದೆ.

ಖಾರ್ಟೊಮ್ : ತನ್ನ ರಾಷ್ಟ್ರದ ಮೊಟ್ಟಮೊದಲ ಉಪಗ್ರಹವನ್ನು ಚೀನಾ ಉಡಾವಣೆ ಮಾಡಿರುವುದಾಗಿ ಈಶಾನ್ಯ ಆಫ್ರಿಕಾದ ಸುಡಾನ್ ನವೆಂಬರ್ 5 ರ ಮಂಗಳವಾರ ಹೇಳಿಕೊಂಡಿದೆ.

ಮಿಲಿಟರಿ, ಆರ್ಥಿಕತೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸಲು ಅನುವಾಗುವ ಉಪಗ್ರಹವನ್ನು ಚೀನಾ  ಉಡಾವಣೆ ಮಾಡಿರುವುದಾಗಿ ಸುಡಾನ್ ಸಾವರಿನ್ ಕೌನ್ಸಿಲ್ ಮುಖ್ಯಸ್ಥ ಜನರಲ್ ಅಬ್ದೆಲ್ ಫತಾಹ್ ಅಲ್-ಬುರ್ಹನ್ ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಉತ್ತರ ಚೀನಾ ಷಾಂಕ್ಸಿ ಪ್ರಾಂತ್ಯದಿಂದ ನವೆಂಬರ್ 3 ರ ಭಾನುವಾರ ಉಡಾವಣೆ ಮಾಡಿರುವುದಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಮಿಲಿಟರಿ ಅವಶ್ಯಕತೆಗಳಿಗಾಗಿ ದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಪತ್ತೆ ಕಾರ್ಯ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯಲ್ಲಿ ಅಭಿವೃದ್ಧಿ ಗುರಿ ಸಾಧನೆಗಾಗಿ ಈ ಉಪಗ್ರಹ ಉಡಾವಣೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾ ಈ ಯೋಜನೆಯ ಪಾಲುದಾರನಾಗಿದ್ದು ಇನ್ನೂ ಕೆಲವೇ ತಿಂಗಳಿನಲ್ಲಿ ಸುಡಾನ್ ನಿಂದಲೇ ಉಪಗ್ರಹ ನಿಯಂತ್ರಣ ನಡೆಸಲಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಸುಡಾನ್ ಆರ್ಥಿಕ ಹಿಂಜರಿತದಲ್ಲಿ ಸಿಲುಕಿದ್ದು ದಶಕದಿಂದಲೂ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗಾಗಿಯೇ ಓಮರ್ ಅಲ್-ಬಶೀರ್ ನೇತೃತ್ವದ ಸುಡಾನ್ ಸರ್ಕಾರ 2013 ರಲ್ಲಿ ಇನ್ ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್ ಆಂಡ್ ಏರೋಸ್ಪೇಸ್(isra) ಆರಂಭಿಸಿದೆ.