ಸಿರಿಸೇನಾ ಪಕ್ಷ ತೊರೆದ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ

0
247

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ತೊರೆದಿದ್ದು, ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ತೊರೆದಿದ್ದು, ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಹಿಂದಾ ರಾಜಪಕ್ಸ ಅವರು ನವೆಂಬರ್ 11 ರ ಭಾನುವಾರ ಸಿರಿಸೇನಾ ಅಧ್ಯಕ್ಷರಾಗಿರುವ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್​ಎಲ್​ಎಫ್​ಪಿ) ಪಕ್ಷವನ್ನು ತೊರೆದು ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಶ್ರೀಲಂಕಾ ಪೀಪಲ್ಸ್​ ಪಾರ್ಟಿ (ಎಸ್​ಎಲ್​ಪಿಪಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 1951ರಲ್ಲಿ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್​ಎಲ್​ಎಫ್​ಪಿ) ಯನ್ನು ಸ್ಥಾಪಿಸಲಾಗಿತ್ತು, ರಾಜಪಕ್ಸ ಅವರ ತಂದೆ ಡಾನ್​ ಅಲ್ವಿನ್​ ರಾಜಪಕ್ಸ ಅವರು ಪಕ್ಷದ ಸಂಸ್ಥಾಪಕ ಸದಸ್ಯರಾಗಿದ್ದರು. ಅಂದಿನಿಂದಲೂ ರಾಜಪಕ್ಸ ಅವರ ಕುಟುಂಬ ಪಕ್ಷದೊಂದಿಗೆ ಗುರುತಿಸಿಕೊಂಡಿತ್ತು.

ಮಹಿಂದಾ ರಾಜಪಕ್ಸ ಅವರು 2006ರಿಂದ 2015ರವರೆಗೆ ಪಕ್ಷದ ಅಧ್ಯಕ್ಷರಾಗಿಯೂ ದುಡಿದಿದ್ದರು. ಆದರೆ ಅ.26ರಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನಿಯೋಜಿಸಿದ್ದರು. ಆದರೆ ಮಹಿಂದಾ ರಾಜಪಕ್ಸ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವುದು ಅಸಾಧ್ಯ ಎಂಬುದು ಖಚಿತವಾಗುತ್ತಿದ್ದ ಅಧ್ಯಕ್ಷ ಸಿರಿಸೇನಾ ಸಂಸತ್​ ಅನ್ನು ವಿಸರ್ಜಿಸಿದ್ದರು. ನಂತರ ಜನವರಿ 5 ರಂದು ಚುನಾವಣೆ ಘೋಷಣೆಯಾಗಿತ್ತು. (ಏಜೆನ್ಸೀಸ್​)