‘ಸಿರಿಯಾಗಿಂತ ಪಾಕ್ ಹೆಚ್ಚು ಅಪಾಯಕಾರಿ’ : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ವರದಿ

0
319

ಜಾಗತಿಕ ಭಯೋತ್ಪಾದನೆಯನ್ನು ಬೆಂಬಲಿಸುತ್ತಾ ಬಂದಿರುವ ಪಾಕಿಸ್ತಾನವು ಸಿರಿಯಾಕ್ಕಿಂತಲೂ ಅಪಾ
ಯಕಾರಿ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ರಾಟೆಜಿಕ್ ಫೋರ್‌ಸೈಟ್ ಗ್ರೂಪ್ ನಡೆಸಿದ ಅಧ್ಯಯನ ವರದಿ
ತಿಳಿಸಿದೆ.

ಲಂಡನ್: ಜಾಗತಿಕ ಭಯೋತ್ಪಾದನೆಯನ್ನು ಬೆಂಬಲಿಸುತ್ತಾ ಬಂದಿರುವ ಪಾಕಿಸ್ತಾನವು ಸಿರಿಯಾಕ್ಕಿಂತಲೂ ಅಪಾಯಕಾರಿ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ರಾಟೆಜಿಕ್ ಫೋರ್‌ಸೈಟ್ ಗ್ರೂಪ್ ನಡೆಸಿದ ಅಧ್ಯಯನ ವರದಿ 
ತಿಳಿಸಿದೆ.

ಪಾಕಿಸ್ತಾನವು, ಮಾನವೀಯತೆಗೆ ಸಂಕಷ್ಟ ಒಡ್ಡಿರುವ ಸಿರಿಯಾಕ್ಕಿಂತ ಮೂರು ಪಟ್ಟು ಅಪಾಯಕಾರಿ ಎಂದು ‘ಹ್ಯೂಮ್ಯಾನಿಟಿ ಅಟ್ ರಿಸ್ಕ್–ಗ್ಲೋಬಲ್ ಥ್ರೆಟ್ ಇನ್ಸಿಡೆಂಟ್’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಂತರರಾಷ್ಟ್ರೀಯ ಭಯೋ
ತ್ಪಾದಕ ಸಂಘಟನೆಗಳಾದ ಅಫ್ಗನ್ ತಾಲಿಬಾನ್ ಹಾಗೂ ಲಷ್ಕರ್ ಮುಂದೆಯೂ ಅತಿಹೆಚ್ಚು ಬೆದರಿಕೆ ಒಡ್ಡಲಿವೆ. ಹೆಚ್ಚಿನ ಸಂಖ್ಯೆಯ ಉಗ್ರರು ನೆಲೆಸಿರುವ ಹಾಗೂ ಅವರಿಗೆ ಸುರಕ್ಷಿತ ನೆಲೆ ಒದಗಿಸಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ’ ಎಂದು ವರದಿ 
ತಿಳಿಸಿದೆ.

‘ಅಫ್ಗನ್‌ನಲ್ಲಿರುವ ಬಹುತೇಕ ಉಗ್ರ ಸಂಘಟನೆಗಳು ಪಾಕಿಸ್ತಾನದ ಬೆಂಬಲದಿಂದಲೇ ಕಾರ್ಯಾಚರಣೆ ನಡೆಸುತ್ತಿವೆ. ಪಾಕಿಸ್ತಾನ, ಅಫ್ಗಾನಿಸ್ತಾನ, ಲಿಬಿಯಾ, ಯೆಮನ್, ಸಿರಿಯಾದಲ್ಲಿ ನೆಲೆಸಿರುವ ಉಗ್ರರ ಸಂಘಟನೆಗಳು ಪರಸ್ಪರ ಸಂಪರ್ಕದಲ್ಲಿವೆ’ ಎಂದು 80 ಪುಟಗಳ ವರದಿ ಅಭಿಪ್ರಾಯಪಟ್ಟಿದೆ.

ಯಾರಿಗೂ ಬಗ್ಗದ ‘ಜಿಹಾದಿ’

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಜಿಹಾದಿ ಕಲ್ಪನೆ ಸುಮಾರು 150 ವರ್ಷಗಳಿಂದ ಬೇರೂರಿದೆ. ಎಷ್ಟೋ ಭಯೋತ್ಪಾದಕ ಸಂಘಟನೆಗಳು ಹುಟ್ಟಿ, ಅವನತಿ ಕಂಡಿವೆ. ಆದರೆ ಜಿಹಾದಿ ಹೋರಾಟ ಮಾತ್ರ ಯಾವುದಕ್ಕೂ ಬಗ್ಗದೆ ಮುಂದುವರಿದಿದೆ. ಅಲ್ಲದೇ ಈ ಸೋಂಕು ಮಧ್ಯಪ್ರಾಚ್ಯ, ಉತ್ತರ ಮತ್ತು ಪಶ್ಚಿಮ ಆಫ್ರಿಕಾಗಳಿಗೂ ವಿಸ್ತರಿಸುತ್ತಿದೆ ಎಂದು ವರದಿ ಹೇಳಿದೆ.