ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಮರುನೇಮಕ: ಸುಪ್ರೀಂಕೋರ್ಟ್ ಆದೇಶ

0
936

ಸಿಬಿಐ ಆಂತರಿಕ ಕಚ್ಚಾಟ ಹಾಗೂ ನಿರ್ದೇಶಕ ಅಲೋಕ್ ವರ್ಮಾ ಕಡ್ಡಾಯ ರಜೆ ಕುರಿತು ಸುಪ್ರೀಂ ಕೋರ್ಟ್ 2019 ಜನೇವರಿ 8 ರ ಮಂಗಳವಾರ ತೀರ್ಪು ನೀಡಿದೆ. ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಮುಂದುವರಿಯುವಂತೆ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ನವದೆಹಲಿ: ಸಿಬಿಐ ಆಂತರಿಕ ಕಚ್ಚಾಟ ಹಾಗೂ ನಿರ್ದೇಶಕ ಅಲೋಕ್ ವರ್ಮಾ ಕಡ್ಡಾಯ ರಜೆ ಕುರಿತು ಸುಪ್ರೀಂ ಕೋರ್ಟ್ 2019 ಜನೇವರಿ 8 ರ  ಮಂಗಳವಾರ ತೀರ್ಪು ನೀಡಿದೆ. ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಮುಂದುವರಿಯುವಂತೆ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಕೇಂದ್ರ ಸರ್ಕಾರದಿಂದ ಕಡ್ಡಾಯ ರಜೆ ಮೇರೆಗೆ ಮನೆಗೆ ಕಳುಹಿಸಿದ್ದ ಮೂರು ತಿಂಗಳ ಬಳಿಕ ಕೇಂದ್ರದ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಮತ್ತೆ ಸಿಬಿಐ ನಿರ್ದೇಶಕನನ್ನಾಗಿ ವರ್ಮಾರನ್ನು ನೇಮಿಸಿ ಆದೇಶ ನೀಡಿದೆ.

ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಅಲೋಕ್‌ ವರ್ಮಾ ಅವರು ಮತ್ತೆ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಬಹುದು. ಆದರೆ, ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಸಿಬಿಐ ನಿರ್ದೇಶಕನನ್ನು ನಿಗ್ರಹಿಸುವ ಸರ್ಕಾರದ ಉದ್ದೇಶವು ಸ್ಪಷ್ಟವಾಗಿ ಕಾಣುತ್ತದೆ ಎಂದು ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ನ್ಯಾಯಾಲಯ ಹೇಳಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರು ಪರಸ್ಪರ ದೂರು ನೀಡಿ, ಕಿತ್ತಾಡಲು ಆರಂಭಿಸಿದಾಗ ಮಧ್ಯಪ್ರವೇಶಿಸಿದ ಪ್ರಧಾನಿ ಕಾರ್ಯಾಲಯ ಇಬ್ಬರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು. ನಾಗೇಶ್ವರ್ ರಾವ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಹೋಗಿದ್ದ ಅಲೋಕ್‌ ಮರ್ಮಾ ಅವರು, ಕೇಂದ್ರ ಸರ್ಕಾರದ ಕ್ರಮವು ಕಾನೂನು ಬಾಹಿರ. ಎರಡು ವರ್ಷ ಅಧಿಕಾರದಲ್ಲಿದ್ದ ನಿರ್ದೇಶಕರನ್ನು ಕೆಳಗಿಳಿಸುವ ಅಧಿಕಾರ ಕೇವಲ ಆಯ್ಕೆ ಸಮಿತಿಗೆ ಇದೆ ಎಂದು ಹೇಳಿದ್ದರು.

ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಕೇಂದ್ರ ಸರ್ಕಾರವು ಇಬ್ಬರು ಅಧಿಕಾರಿಗಳು ಬೆಕ್ಕುಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಕಡ್ಡಾಯ ರಜೆ ಮೇಲೆ ಇಬ್ಬರು ಅಧಿಕಾರಿಗಳನ್ನು ಕಳುಹಿಸುವುದನ್ನು ಬಿಟ್ಟರೆ ಸರ್ಕಾರದ ಮುಂದೆ ಯಾವುದೇ ಆಯ್ಕೆ ಇರಲಿಲ್ಲ ಎಂದು ಹೇಳಿತ್ತು. ಕೇಂದ್ರ ವಿಜಿಲೆನ್ಸ್ ಕಮಿಷನ್ ಅಸಾಧಾರಣ ಸಂದರ್ಭಗಳಲ್ಲಿ ಅಸಾಧಾರಣ ಪರಿಹಾರವೇ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿತ್ತು. (ಏಜೆನ್ಸೀಸ್)