ಸಿಬಿಎಸ್‌ಇ ಮಕ್ಕಳಿಗೆ “ಕಲಾ ಶಿಕ್ಷಣ” ಕಲಿಕೆ ಕಡ್ಡಾಯ

0
28

ದೇಸಿ ಸಂಸ್ಕೃತಿ ಕಲಿಸುವ ಉದ್ದೇಶದಿಂದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌(ಸಿಬಿಎಸ್‌ಇ) ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕಲಾ ಶಿಕ್ಷಣ ಕಡ್ಡಾಯಗೊಳಿಸಿದೆ. ಸಿಬಿಎಸ್‌ಇ ಶಾಲೆಗಳಲ್ಲಿ 1ರಿಂದ 12ನೇ ತರಗತಿ ಮಕ್ಕಳಿಗೆ ಜಾನಪದ ಕಲೆ, ನೃತ್ಯ, ರಂಗಭೂಮಿ, ದೃಶ್ಯಕಲೆ, ಪಾಕಶಾಸ್ತ್ರವನ್ನು ಈ ವರ್ಷದಿಂದಲೇ ಪಠ್ಯದ ಜತೆ ಕಲಿಸಬೇಕು ಎಂದು ಆದೇಶಿಸಿದೆ.

ನವದೆಹಲಿ : ದೇಸಿ ಸಂಸ್ಕೃತಿ ಕಲಿಸುವ ಉದ್ದೇಶದಿಂದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌(ಸಿಬಿಎಸ್‌ಇ) ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕಲಾ ಶಿಕ್ಷಣ ಕಡ್ಡಾಯಗೊಳಿಸಿದೆ. ಸಿಬಿಎಸ್‌ಇ ಶಾಲೆಗಳಲ್ಲಿ 1ರಿಂದ 12ನೇ ತರಗತಿ ಮಕ್ಕಳಿಗೆ ಜಾನಪದ ಕಲೆ, ನೃತ್ಯ, ರಂಗಭೂಮಿ, ದೃಶ್ಯಕಲೆ, ಪಾಕಶಾಸ್ತ್ರವನ್ನು ಈ ವರ್ಷದಿಂದಲೇ ಪಠ್ಯದ ಜತೆ ಕಲಿಸಬೇಕು ಎಂದು ಆದೇಶಿಸಿದೆ. 

ಪ್ರತಿ ಜಿಲ್ಲೆಗಳಲ್ಲಿರುವ ಶಾಲೆಗಳು ಈಗ ತಮ್ಮದೇ ಆದ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಯಾವುದೇ ಔಪಚಾರಿಕ ಪರೀಕ್ಷೆ ಇಲ್ಲ. ಆದರೆ ಪ್ರಾಯೋಗಿಕ ಮತ್ತು ಯೋಜನಾ ಕಾರ್ಯದ ಮೂಲಕ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಯುತ್ತದೆ. 

ಪಠ್ಯಪುಸ್ತಕದ ಮಾಹಿತಿ ದಾಟಿ ಹೊಸತೇನೋ ಕಲಿಸುವ ಉದ್ದೇಶ ಸಿಬಿಎಸ್‌ಇ ಮಂಡಳಿಗಿದೆ. ಸಿಬಿಎಸ್‌ಇ ಪಠ್ಯದ ಶಾಲೆಗಳು ತಮ್ಮ ಮಕ್ಕಳಿಗೆ ಈ ಕಲಾ ಶಿಕ್ಷಣ ಕಲಿಸಲು ಹೊಸ ಯೋಜನೆ ಸಿದ್ಧಪಡಿಸಿವೆ. ಮಕ್ಕಳು ವಿಶ್ವದಲ್ಲಿನ ಗ್ರಹಗಳು, ಕಾಡುಗಳು, ಸಾಗರಗಳು, ತಮ್ಮ ಸುತ್ತಮುತ್ತ ಇರುವ ಪರಿಸರದ ಚಿತ್ರಗಳ ಆಯ್ಕೆ ಮಾಡಿ ಅದರ ಮೇಲೆ ಪ್ರವಾಸ ಕೈಪಿಡಿ ರಚಿಸಬೇಕೆಂದು ಆದೇಶಿಸಲಾಗಿದೆ. ಬೋಧನೆಗೆ ಬದಲಾಗಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು. ಮಕ್ಕಳ ಸಂವಾದಾತ್ಮಕ ಪಾಲ್ಗೊಳ್ಳುವಿಕೆ ಇರಬೇಕಾಗಿದೆ. 

ವಾರಕ್ಕೆ ಎರಡು ಕ್ಲಾಸ್‌: ಸಿಬಿಎಸ್‌ಇ ಶಾಲೆಗಳಲ್ಲಿ 1ರಿಂದ 12ನೇ ತರಗತಿ ಮಕ್ಕಳಿಗೆ ಅಧ್ಯಾಪಕರು ವಾರಕ್ಕೆ ಎರಡು ತರಗತಿ ಕಲಾ ಶಿಕ್ಷಣಕ್ಕೆ ಮೀಸಲು ಇಡಬೇಕು. ಕಲೆ, ನೃತ್ಯ, ದೃಶ್ಯ ಕಲೆ, ಮ್ಯೂಸಿಕ್‌ಗಳನ್ನು ವೀಡಿಯೊ ಮೂಲಕ ಹೇಳಿಕೊಡಬೇಕು.ಇದಕ್ಕಾಗಿ ಪ್ರತ್ಯೇಕ ಕಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. 

6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ದೃಶ್ಯ ಮತ್ತು ರಂಗಭೂಮಿ ಜತೆಗೆ ಪಾಕಶಾಲೆ, ಕೃಷಿ ವಿಷಯ ಪರಿಚಯಿಸಬೇಕು. ಈ ಪಾಕಶಾಸ್ತ್ರದ ಕಲೆಗಳಲ್ಲಿ ರೈತರ ಬೆಳೆಗಳು, ಅವುಗಳ ಪೋಷಣೆ, ವ್ಯವಸಾಯದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಅಲ್ಲದೇ ಪೌಷ್ಟಿಕ ಆಹಾರದ ಮಹತ್ವ, ಮಸಾಲೆಗಳ ಬಗ್ಗೆ, ವಿವಿಧ ಬೀಜಗಳಿಂದ ತೈಲ ತಯಾರಿಕೆ ಕುರಿತು ತಿಳಿಸಿಕೊಡಬೇಕು. 

ಗ್ರೇಡ್‌ ಸಿಸ್ಟ್‌ಮ್‌ : ಕ್ಲಾಸಿನಲ್ಲಿ ಕಲಿಸಿಕೊಡುವ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಯುವುದಿಲ್ಲ. ಆದರೆ ಶಾಲೆಗಳು ತಮ್ಮದೇ ಆದ ಪ್ರಕ್ರಿಯೆ ರೂಪಿಸಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆ ಬಗ್ಗೆ ಮೌಲ್ಯಮಾಪನವಿರುತ್ತದೆ. ಇವುಗಳಿಗೆ ಅಂಕಪಟ್ಟಿಯಲ್ಲಿ ಗ್ರೇಡ್‌ ನೀಡಲಾಗುವುದು. ಒಟ್ಟಾರೆ ಮಕ್ಕಳಲ್ಲಿ ಸ್ವಂತ ಸಾಮರ್ಥ್ಯ‌ ತಿಳಿಸುವ ಜತೆಗೆ ಸಂಸ್ಕೃತಿ , ಜ್ಞಾನ ಹೆಚ್ಚಿಸಲು ಸಿಬಿಎಸ್‌ಇ ನವನವೀನ ಮಾರ್ಗವೊಂದನ್ನು ಕಲಿಸಲು ಹೊರಟಿದೆ. ಆದರೆ ಇದನ್ನು ಶಾಲೆಗಳು ಎಷ್ಟರಮಟ್ಟಿಗೆ ಅನುಸರಿಸಲಿವೆ ಎಂಬದನ್ನು ಕಾದು ನೋಡಬೇಕು. 

ಕಲೆಯಿಂದ ಕೌಶಲ: ಮಗುವಿಗೆ ಕಲೆ ಶಿಕ್ಷ ಣ ಕಲಿಸುವುದರಿಂದ ವಸ್ತುಗಳ ಪರಿಕಲ್ಪನೆಗಳು, ವಿಷಯಗಳ ಬಗ್ಗೆ ಆಳವಾದ ಗ್ರಹಿಕೆ ಮೂಡುತ್ತದೆ. ಅಲ್ಲದೇ ವಿಚಾರಣೆ, ತನಿಖೆ, ಪರಿಶೋಧನೆ, ನಿರ್ಣಾಯಕ ಚಿಂತನೆ, ಸೃಜನಾತ್ಮಕತೆ ಹಂತಗಳಲ್ಲಿ ಮಗು ತಿಳಿದುಕೊಳ್ಳುತ್ತದೆ. ಜತೆಗೆ ಸಮಸ್ಯೆ-ಪರಿಹರಿಸುವ ಸಾಮರ್ಥ್ಯ‌ ತಿಳಿದುಕೊಳ್ಳುತ್ತದೆ. ಈ ರೀತಿಯ ಬೋಧನೆ ಪ್ರಕ್ರಿಯೆ ಮಗುವನ್ನು ಸಂತೋಷವಾಗಿಡುತ್ತದೆ. ಸಂವಹನ ಕೌಶಲ್ಯ, ಆತ್ಮವಿಶ್ವಾಸ ಬೆಳೆಸುತ್ತದೆ.