ಸಿಬಿಎಸ್​ಇ 12 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರದ್ದೇ ಮೇಲುಗೈ

0
18

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್​ಇ) 12ನೇ ತರಗತಿ ಪರೀಕ್ಷಾ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದ್ದು, ಶೇಕಡಾವಾರು 84.4 ರಷ್ಟು ಫಲಿತಾಂಶ ಬಂದಿದೆ.

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್​ಇ) 12ನೇ ತರಗತಿ ಪರೀಕ್ಷಾ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದ್ದು, ಶೇಕಡಾವಾರು 84.4 ರಷ್ಟು ಫಲಿತಾಂಶ ಬಂದಿದೆ.
ತಿರುವನಂತಪುರಂ ಸಿಬಿಎಸ್​ಇ ಫಲಿತಾಂಶ ಶೇ.98.2 ರಷ್ಟಾಗಿದ್ದು ಮೊದಲ ಸ್ಥಾನದಲ್ಲಿದೆ. ಚೆನ್ನೈ ಶೇ.92.93, ದೆಹಲಿ ಶೇ.91.87ರಷ್ಟು ಫಲಿತಾಂಶ ಪಡೆದಿವೆ. ಹಾಗೇ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಓದುತ್ತಿದ್ದ ಸಿಬಿಎಸ್​ಇ ವಿದ್ಯಾರ್ಥಿಗಳ ಒಟ್ಟು ಫಲಿತಾಂಶ ಶೇ.95.43ರಷ್ಟಾಗಿದೆ.

ಈ ಬಾರಿಯೂ ಹೆಣ್ಣುಮಕ್ಕಳೇ ಮುಂದು
ಪ್ರತಿವರ್ಷಗಳಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಉತ್ತಮ ಫಲಿತಾಂಶ ಪಡೆದಿದ್ದು ಉತ್ತರ ಪ್ರದೇಶ ಹಂಸಿಕಾ ಶುಕ್ಲಾ ಹಾಗೂ ಕರಿಷ್ಮಾ ಅರೋರಾ 500 ಅಂಕಗಳಿಗೆ 499 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಶೇ.88.70 ಹೆಣ್ಣುಮಕ್ಕಳು, ಶೇ.83.3ರಷ್ಟು ಲಿಂಗಪರಿವರ್ತಿತರು ಮತ್ತು ಶೇ.79.4ರಷ್ಟು ಗಂಡುಮಕ್ಕಳು ಉತ್ತೀರ್ಣರಾಗಿದ್ದಾರೆ.

ಕೇಂದ್ರೀಯ ವಿದ್ಯಾಲಯ ಶಾಲೆಗಳು ಶೇ.98.54, ಟಿಬೇಟಿಯನ್​ ಶಾಲೆಗಳು ಶೇ.96, ಸರ್ಕಾರಿ ಅನುದಾನಿತ ಶಾಲೆಗಳು ಶೇ.88.49 ಹಾಗೂ ಖಾಸಗಿ ಶಾಲೆಗಳು ಶೇ.82.52ರಷ್ಟು ಫಲಿತಾಂಶ ಪಡೆದಿವೆ.
ಸಿಬಿಎಸ್​ಇ ಪರೀಕ್ಷೆಗಳು ಫೆ.16ರಿಂದ ಪ್ರಾರಂಭವಾಗಿದ್ದವು. ಸುಮಾರು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ ವೆಬ್​ಸೈಟ್​ cbse.nic.in ನಲ್ಲಿ ತಮ್ಮ ಫಲಿತಾಂಶ ನೋಡಬಹುದು. ಹಾಗೇಯೇ cbse.examresults.net, cbseresults.nic.in ಮತ್ತು results.gov.in  ವೆಬ್​ಸೈಟ್​ಗಳಲ್ಲೂ ಲಭ್ಯವಿದೆ.