ಸಿಕ್ಕಿಂ ನೂತನ ಮುಖ್ಯಮಂತ್ರಿಯಾಗಿ “ಪ್ರೇಮ್ ಸಿಂಗ್ ತಮಂಗ್”

0
89

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್​ಕೆಎಂ) ಅಧ್ಯಕ್ಷ ಪ್ರೇಮ್ ಸಿಂಗ್ ತಮಂಗ್ ಸಿಕ್ಕಿಂ ಮುಖ್ಯಮಂತ್ರಿಯಾಗಿ ಮೇ 27 ರ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ಪಿ.ಎಸ್ ಗೋಲೆ ಎಂದೇ ಪ್ರಸಿದ್ದರಾಗಿದ್ದಾರೆ.ಅಧಿಕಾರ ವಹಿಸಿಕೊಂಡ ದಿನವೇ ಸರ್ಕಾರಿ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ ಎಂದು ಘೋಷಣೆ ಮಾಡಿದ್ದಾರೆ.

ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್​ಕೆಎಂ) ಅಧ್ಯಕ್ಷ ಪ್ರೇಮ್ ಸಿಂಗ್ ತಮಂಗ್ ಅವರು ಸಿಕ್ಕಿಂ ರಾಜ್ಯದ 6 ನೇ  ಮುಖ್ಯಮಂತ್ರಿಯಾಗಿ ಮೇ 27  ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು  ಪಿ.ಎಸ್ ಗೋಲೆ ಎಂದೇ ಪ್ರಸಿದ್ದರಾಗಿದ್ದಾರೆ.

ಗೋಲೆ ಅವರರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ದಿನವೇ ಮುಖ್ಯಮಂತ್ರಿ ಸರ್ಕಾರಿ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ ಎಂದು ಘೋಷಣೆ ಮಾಡಿದ್ದಾರೆ.

ಲೋಕಸಭೆ ಜತೆಗೆ 32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಗೂ ಚುನಾವಣೆ ನಡೆದಿತ್ತು. ಎಸ್​ಕೆಎಂ 17 ಸ್ಥಾನಗಳಲ್ಲಿ ಗೆದ್ದು ಸರಳ ಬಹುಮತ ಪಡೆದುಕೊಂಡಿದೆ. ಎನ್​ಡಿಎ ಅಂಗಪಕ್ಷವಾದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್​ಡಿಎಫ್) 15 ಕ್ಷೇತ್ರಗಳಲ್ಲಿ ಗೆಲುವು ಪಡೆಯಿತು. ಪಿಎಸ್ ಗೊಲೆ ಎಂದೇ ಖ್ಯಾತರಾಗಿರುವ ತಮಾಂಗ್, ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದರು. 2 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾದರೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಇದೆ. ಹೀಗಾಗಿ ಗೊಲೆ ಸಿಎಂ ಆಗಬಹುದೇ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಾಗಿ ರಾಜ್ಯಪಾಲ ಗಂಗಾ ಪ್ರಸಾದ್ ಎಸ್​ಕೆಎಂ ನಿಯೋಗಕ್ಕೆ ಹೇಳಿದ್ದಾರೆ. 1993ರಿಂದ ಸತತ ಐದು ಅವಧಿಗೆ ಸಿಎಂ ಆಗಿದ್ದ ಎಸ್​ಡಿಎಫ್ ನೇತಾರ ಪವನ್ ಕುಮಾರ್ ಚಾಮಂಗ್ಲಿ ಚುನಾವಣೆ ಬಳಿಕ ರಾಜೀನಾಮೆ ನೀಡಿದ್ದರು.

ಶಿಕ್ಷಕ ಹುದ್ದೆಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ : ಡಾರ್ಜಲಿಂಗ್ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಗೋಲೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದಕ್ಕೂ ಮುನ್ನ ಶಿಕ್ಷಕರಾಗಿದ್ದರು. ಬಳಿಕ  ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ(ಎಸ್.ಡಿ.ಎಫ್) ಪಕ್ಷವನ್ನು ಸೇರಿದ್ದರು. ಎಸ್.ಡಿ.ಎಫ್ ಅಭ್ಯರ್ಥಿಯಾಗಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪವನ್ ಚಾಮ್ಲಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ 2009 ರವರೆಗೆ ಕಾರ್ಯನಿರ್ವಹಿಸಿದ್ದರು. 2009 ರಲ್ಲಿ ಸಚಿವ ಸ್ಥಾನ ನಿರಾಕರಿಸಿದಾಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಎಸ್.ಕೆ.ಎಂ ಪಕ್ಷ ಹುಟ್ಟುಹಾಕಿದ್ದರು.

2016 ರಲ್ಲಿ ಇವರ ವಿರುದ್ದ ಭ್ರಷ್ಟಾಚಾರ ಪ್ರಕರಣ ಸಾಬೀತಾದ ಬಳಿಕ ಶಿಕ್ಷೆಗೆ ಗುರಿಯಾಗಿದ್ದು, ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದರು. ಜೈಲು ಸೇರಿದ್ದ ಅವರು 2018 ರ ಆಗಸ್ಟ್ ನಲ್ಲಿ ಬಿಡುಗಡೆಗೊಂಡಿದ್ದರು.

ಈಚೆಗೆ ನಡೆದ ಚುನಾವಣೆಯಲ್ಲಿ ಅವರು ಸ್ಪರ್ದಿಸಿರಲಿಲ್ಲ ಭ್ರಷ್ಟಾಚಾರ ಆರೋಪ ಸಾಬೀತು ಇದರಿಂದ ಜೈಲಿನಲ್ಲಿದ್ದ ಕಾರಣ ತಮ್ಮ ನಾಮಪತ್ರ ತಿರಸ್ಕೃತಗೊಳ್ಳಬಹುದು ಎಂಬ ಆತಂಕ ಇದಕ್ಕೆ ಕಾರಣವಾಗಿತ್ತು