ಸಿಐಸಿ ಮುಖ್ಯಸ್ಥರಾಗಿ ಸುಧೀರ್‌ ಭಾರ್ಗವ ನೇಮಕ

0
674

ಸುಧೀರ್‌ ಭಾರ್ಗವ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರು ನಿವೃತ್ತ ಅಧಿಕಾರಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಆದೇಶ ಹೊರಡಿಸಿದ್ದಾರೆ.

ನವದೆಹಲಿ (ಪಿಟಿಐ): ಸುಧೀರ್‌ ಭಾರ್ಗವ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರು ನಿವೃತ್ತ ಅಧಿಕಾರಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಆದೇಶ ಹೊರಡಿಸಿದ್ದಾರೆ. 

ಭಾರ್ಗವ ಅವರು ಇದುವರೆಗೂ ಮಾಹಿತಿ ಆಯುಕ್ತರಾಗಿದ್ದರು. 11 ಸದಸ್ಯರು ಇರಬೇಕಾದ ಜಾಗದಲ್ಲಿ ಆಯೋಗದಲ್ಲಿ ಇದುವರೆಗೂ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.

ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯಶ್‌ವರ್ಧನ್‌ ಕುಮಾರ್‌ ಸಿನ್ಹಾ, ನಿವೃತ್ತ ಐಆರ್‌ಎಸ್‌ ಅಧಿಕಾರಿ ವನಜಾ ಎನ್‌. ಸರ್ನಾ, ನಿವೃತ್ತ ನೀರಜ್‌ ಕುಮಾರ್‌ ಗುಪ್ತಾ ಹಾಗೂ ಕಾನೂನು ಇಲಾಖೆ ಮಾಜಿ ಕಾರ್ಯದರ್ಶಿ ಸುರೇಶ್‌ ಚಂದ್ರ ಅವರು ಆಯುಕ್ತರಾಗಿ ನೇಮಕಗೊಂಡವರು. ನೇಮಕಗೊಂಡ ನಾಲ್ವರು ಅಧಿಕಾರಿಗಳು ಕೂಡ ಈ ವರ್ಷವೇ ನಿವೃತ್ತರಾಗಿದ್ದರು.