ಸಿಂಗಾಪುರದಲ್ಲಿ ಅಪಿಕ್ಸ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

0
306

ಜಾಗತಿಕ ಹಣಕಾಸು ವೇದಿಕೆ ಅಪಿಕ್ಸ್ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್​ಫೇಸ್ ಎಕ್ಸ್ ಚೇಂಜ್)ಗೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 14 ರ ಬುಧವಾರ ಚಾಲನೆ ನೀಡಿದ್ದಾರೆ.

ಸಿಂಗಾಪುರ: ಜಾಗತಿಕ ಹಣಕಾಸು ವೇದಿಕೆ ಅಪಿಕ್ಸ್ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್​ಫೇಸ್ ಎಕ್ಸ್ ಚೇಂಜ್)ಗೆ ಪ್ರಧಾನಿ ನರೇಂದ್ರ ಮೋದಿ  ನವೆಂಬರ್ 14 ರ ಬುಧವಾರ ಚಾಲನೆ ನೀಡಿದ್ದಾರೆ.

ಜಾಗತಿಕವಾಗಿ ಬ್ಯಾಂಕಿಂಗ್ ಕ್ಷೇತ್ರಗಳಿಂದ ದೂರವಿರುವ 23 ದೇಶಗಳ 170 ಕೋಟಿ ಜನರನ್ನು ಬ್ಯಾಂಕ್ ವ್ಯವಹಾರದ ವ್ಯಾಪ್ತಿಗೆ ತರುವ ಉದ್ದೇಶದಿಂದ ಈ ಯೋಜನೆ ಘೋಷಿಸಲಾಗಿದೆ. ಏಷಿಯಾನಾ ಕೂಟದ 10 ರಾಷ್ಟ್ರಗಳು ಕೂಡ ಅಪಿಕ್ಸ್ ವ್ಯಾಪ್ತಿಗೆ ಬರಲಿವೆ.

ಪ್ರಧಾನಿ ಮೋದಿ ಹಾಗೂ ಸಿಂಗಾಪುರದ ಉಪ ಪ್ರಧಾನಿ ಟಿ. ಷಣ್ಮುಗರತ್ನಂ ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ. 23 ದೇಶಗಳಲ್ಲಿನ ಹಳ್ಳಿ-ಹಳ್ಳಿಯನ್ನು ಈ ವ್ಯವಸ್ಥೆ ತಲುಪಲಿದೆ. ಅಸಂಘಟಿತ ವಲಯದ ನೂರಾರು ಕೋಟಿ ಜನರಿಗೆ ಪಿಂಚಣಿ ಹಾಗೂ ವಿಮೆಯನ್ನು ಈ ಯೋಜನೆ ಮೂಲಕ ತಲುಪಿಸಲಾಗುತ್ತದೆ. ಖಾತೆ ರಹಿತ ವ್ಯಕ್ತಿಗಳನ್ನು ಬ್ಯಾಂಕ್​ಗಳು ತಲುಪಲು ಅಪಿಕ್ಸ್ ನೆರವು ನೀಡಲಿದೆ. ಹೈದಾರಾಬಾದ್, ಲಂಡನ್ ಹಾಗೂ ಕೊಲೊಂಬೊದ ತಂತ್ರಜ್ಞರು ಈ ವ್ಯವಸ್ಥೆಯನ್ನು ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆರ್​ಸಿಇಪಿ ಇನ್ನಷ್ಟು ವಿಳಂಬ

ಏಷ್ಯಾ ಪೆಸಿಫಿಕ್ ವಲಯದ ವಾಣಿಜ್ಯ ವ್ಯವಹಾರಕ್ಕಾಗಿ ರೂಪುಗೊಳ್ಳುತ್ತಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ ಕುರಿತು ಅಂತಿಮ ನಿರ್ಧಾರಕ್ಕೆ ಭಾರತ ಸೇರಿ 16 ರಾಷ್ಟ್ರಗಳು ವಿಫಲವಾಗಿವೆ. ಏಷ್ಯಾ-ಪೆಸಿಫಿಕ್ ವಲಯದ ರಾಷ್ಟ್ರಗಳ ಪ್ರತಿನಿಧಿಗಳು ಸಿಂಗಾಪುರದಲ್ಲಿ ಬುಧವಾರ ಮಹತ್ವದ ಮಾತುಕತೆ ನಡೆಸಿ 18 ಒಪ್ಪಂದಗಳ ಪೈಕಿ 7 ಒಪ್ಪಂದಗಳ ಕುರಿತು ನಿರ್ಣಯ ಮಾಡಿವೆ. ಆದರೆ ಉಳಿದ ವಿಚಾರಗಳನ್ನು 2019ರ ಅಂತ್ಯದೊಳಗೆ ಅಂತಿಮಗೊಳಿಸಲು ಸದಸ್ಯ ರಾಷ್ಟ್ರಗಳು ನಿರ್ಧರಿಸಿವೆ. ಅಮೆರಿಕಕ್ಕೆ ಸೆಡ್ಡು ಹೊಡೆಯಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಹವಾಲಾ ವ್ಯವಹಾರ ಹಾಗೂ ಆರ್ಥಿಕ ಅಪರಾಧಗಳನ್ನು ತಡೆಯಲು ಹಣಕಾಸು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕಿದೆ. ಹೀಗಾಗಿ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸೈಬರ್ ಅಪರಾಧಗಳಿಂದ ಮುಕ್ತಗೊಳಿಸಬೇಕಿದೆ.                                                                                                           – ನರೇಂದ್ರ ಮೋದಿ ಪ್ರಧಾನಿ

ಫಿನ್​ಟೆಕ್ ಸಮ್ಮೇಳನದಲ್ಲಿ ಮೋದಿ ಮಾತು

ಫಿನ್​ಟೆಕ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮೊದಲ ಜಾಗತಿಕ ನಾಯಕ ಎನ್ನುವ ಖ್ಯಾತಿಗೆ ಮೋದಿ ಪಾತ್ರರಾದರು. ಸಮ್ಮೇಳನದಲ್ಲಿ ಸುಮಾರು 100 ದೇಶಗಳಿಂದ 30 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. ರುಪೇ, ಯುಪಿಐ ಹಾಗೂ ಭೀಮ್ಂದ ಭಾರತದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಸುಮಾರು 128 ಬ್ಯಾಂಕ್​ಗಳು ಯುಪಿಐ ವ್ಯಾಪ್ತಿಗೆ ಬಂದಿದ್ದು, ಕಳೆದ 2 ವರ್ಷಗಳಲ್ಲಿ 1500 ಪಟ್ಟು ಬೆಳವಣಿಗೆ ಸಾಧಿಸಿದೆ ಎಂದಿದ್ದಾರೆ.