ಸಿಂಗಪುರ ಗ್ರ್ಯಾನ್‌ ಪ್ರಿ ಫಾರ್ಮುಲಾ–1: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

0
21

ಭಾನುವಾರ ನಡೆದ ಫಾಮುಲಾ ಒನ್ ಸಿಂಗಾಪುರ ಜಿಪಿಯಲ್ಲಿ ಚಾಂಪಿಯನ್​ಷಿಪ್ ಪಟ್ಟದ ನೇರ ಎದುರಾಳಿಯಾಗಿದ್ದ ಬ್ರಿಟನ್​ನ ಲೂಯಿಸ್ ಹ್ಯಾಮಿಲ್ಟನ್ ಪ್ರಶಸ್ತಿ ಗೆಲ್ಲುವ ಮೂಲಕ, 2ನೇ ಸ್ಥಾನಿ ವೆಟ್ಟೆಲ್ ವಿರುದ್ಧ ವಿಶ್ವ ಚಾಂಪಿಯನ್​ಷಿಪ್ ಪಟ್ಟಿಯಲ್ಲಿ ಮುನ್ನಡೆಯನ್ನು 28 ಅಂಕಕ್ಕೆ ಏರಿಸಿಕೊಂಡಿದ್ದಾರೆ. ಮರೀನಾ ಬೇ ಸ್ಟ್ರೀಟ್ ಸರ್ಕ್ಯೂಟ್​ನಲ್ಲಿ ನಡೆದ ರೇಸ್​ನಲ್ಲಿ ಮರ್ಸಿಡೀಸ್ ತಂಡದ ಹ್ಯಾಮಿಲ್ಟನ್ ಪ್ರಶಸ್ತಿ ಜಯಿಸಿದರೆ, ರೆಡ್​ಬುಲ್​ನ ಆಸ್ಟ್ರೇಲಿಯಾದ ಚಾಲಕ ಡೇನಿಯಲ್ ರಿಕಿಯಾಡೋ 2ನೇ ಸ್ಥಾನ ಹಾಗೂ ಮರ್ಸಿಡೀಸ್​ನ ವ್ಲಾಟ್ಟೆರಿ ಬೊಟ್ಟಾಸ್ 3ನೇ ಸ್ಥಾನ ಪಡೆದರು.

ಮಳೆಯಿಂದ ಒದ್ದೆಯಾಗಿದ್ದ ಟ್ರ್ಯಾಕ್‌ನಲ್ಲಿ ಶರವೇಗದಲ್ಲಿ ಕಾರು ಚಲಾಯಿಸಿದ ಮರ್ಸಿಡೀಸ್‌ ತಂಡದ ಲೆವಿಸ್‌ ಹ್ಯಾಮಿಲ್ಟನ್‌ ಅವರು ಸಿಂಗಪುರ ಗ್ರ್ಯಾನ್‌ ಪ್ರಿ ಫಾರ್ಮುಲಾ–1 ರೇಸ್‌ನಲ್ಲಿ ಟ್ರೋಫಿ ಎತ್ತಿಹಿಡಿದಿದ್ದಾರೆ.

ಭಾನುವಾರ ನಡೆದ ರೇಸ್‌ನಲ್ಲಿ ಆರಂಭದಿಂದಲೇ ಅಮೋಘ ಚಾಲನಾ ಕೌಶಲ ಮೆರೆದ ಬ್ರಿಟನ್‌ನ ಚಾಲಕ ಹ್ಯಾಮಿಲ್ಟನ್‌ ಯಾವುದೇ ಹಂತದಲ್ಲೂ ಪ್ರತಿಸ್ಪರ್ಧಿಗಳಿಗೆ ಮುನ್ನಡೆ ಬಿಟ್ಟುಕೊಡದೆ ಗುರಿ ಕ್ರಮಿಸಿದರು. ಈ ಮೂಲಕ ಋತುವಿನ ಏಳನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹ್ಯಾಮಿಲ್ಟನ್‌ ಅವರು ವೃತ್ತಿಬದುಕಿನಲ್ಲಿ ಗೆದ್ದ ಒಟ್ಟಾರೆ 60ನೇ ಟ್ರೋಫಿ ಇದಾಗಿದೆ.

ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌, ಕಿಮಿ ರಾಯಿಕ್ಕೊನೆನ್‌ ಮತ್ತು ರೆಡ್‌ಬುಲ್‌ ತಂಡದ ಮ್ಯಾಕ್ಸ್‌ ವೆಸ್ಟಾಪನ್‌ ಅವರ ಕಾರುಗಳು ಅಪಘಾತಕ್ಕೀಡಾಗಿದ್ದರಿಂದ ಇವರು ಮೊದಲ ಲ್ಯಾಪ್‌ನ ನಂತರ ಸ್ಪರ್ಧೆಯಿಂದ ಹಿಂದೆ ಸರಿದರು. 12 ಚಾಲಕರಿಗೆ ಮಾತ್ರ ರೇಸ್‌ ಪೂರ್ಣಗೊಳಿಸಲು ಸಾಧ್ಯವಾಯಿತು.

ರೆಡ್‌ ಬುಲ್‌ ತಂಡವನ್ನು ಪ್ರತಿನಿಧಿಸಿದ್ದ ಆಸ್ಟ್ರೇಲಿಯಾದ ಚಾಲಕ ಡೇನಿಯಲ್‌ ರಿಕಿಯಾರ್ಡೊ ಎರಡನೇ ಸ್ಥಾನ ಗಳಿಸಿದರು. ಮರ್ಸಿಡೀಸ್‌ ತಂಡದ ಮತ್ತೊಬ್ಬ ಚಾಲಕ ವಲಟ್ಟೆರಿ ಬೊಥಾಸ್‌ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.