ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಅಮೃತ ಪ್ರೀತಂಗೆ ಗೂಗಲ್ ಡೂಡಲ್ ವಿಶೇಷ ಗೌರವ

0
26

ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಾಗೂ ಸಮೃದ್ಧ ಬರಹಗಾರರಲ್ಲಿ ಒಬ್ಬರಾದ ಪಂಜಾಬಿ ಲೇಖಕಿ ಅಮೃತ ಪ್ರೀತಂ ಅವರ 100ನೇ ಜನ್ಮಾದಿನಾಚರಣೆಗೆ ಗೂಗಲ್, ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

ನವ ದೆಹಲಿ: ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಾಗೂ ಸಮೃದ್ಧ ಬರಹಗಾರರಲ್ಲಿ ಒಬ್ಬರಾದ ಪಂಜಾಬಿ ಲೇಖಕಿ ಅಮೃತ ಪ್ರೀತಂ ಅವರ 100ನೇ ಜನ್ಮಾದಿನಾಚರಣೆಗೆ ಗೂಗಲ್, ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

ಮಹಿಳಾ ಪರ ದನಿಯಾಗಿ, ಹಲವು ಭಾಷೆಯ ಓದುಗರನ್ನು ಕಾಡಿದ ವಿಶಿಷ್ಠ ಬರಹಗಾರ್ತಿ ಇವರು. ತಮ್ಮ ಬರಹಗಳಿಂದ ವಿಶಿಷ್ಠ ಅಲೆಗಳನ್ನು ಹೊರಹೊಮ್ಮಿಸಿದ ಇವರಿಗೆ ಜ್ಙಾನಪೀಠ ಪ್ರಶಸ್ತಿ, ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಪದ್ಮಶ್ರಿ, ಗೌರವ ಡಾಕ್ಟರೇಟ್, ರಾಜ್ಯಸಭಾ ಸದಸ್ಯತ್ವ ಮುಂತಾದ ಹಲವು ಉನ್ನತ ಗೌರವಗಳು ಸಂದಿವೆ .

100 ವರುಷಗಳ ಹಿಂದೆ ಆಗಸ್ಟ್ 31,1919 ರಲ್ಲಿ ಗುಜ್ರನ್ವಾಲದಲ್ಲಿ ಜನಸಿದ ಇವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಕವನ ಸಂಕಲನ ಪ್ರಕಟಿಸಿದ್ದರು. ಭಾರತದ ವಿಭಜನೆ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಇವರು ಅಲ್ಲಿದ್ದುಕೊಂಡೆ ಪಂಜಾಬಿ, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಬರೆಯುತ್ತಿದ್ದರು .

20ನೇ ಶತಮಾನದ ಶ್ರೇಷ್ಟ ಬರಹಗಾರರಲ್ಲಿ ಒಬ್ಬರಾದ ಇವರು ಪಿಂಜಾರ್ ಸೇರಿದಂತೆ 100ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ . ಪಿಂಜಾರ್ ಪುಸ್ತಕವನ್ನು ಭಾರತದ ವಿಭಜನೆಯ ಸಮಯದಲ್ಲಿ ಚಲನಚಿತ್ರವಾಗಿ ಮಾರ್ಪಡಿಸಲಾಗಿತ್ತು. ಅವರ ಆತ್ಮಚರಿತ್ರೆ ಕಾಲಾ ಗುಲಾಬ್ (ಕಪ್ಪು ಗುಲಾಬಿ) ನಲ್ಲಿ ವ್ಯೆಯಕ್ತಿಕ ಬದುಕಿನ ಅದೆಷ್ಟೋ ಘಟನೆಗಳನ್ನು ದಾಖಲಿಸಿದ್ದಾರೆ. ಇವರ ಪುಸ್ತಕಗಳು ಹಲವು ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.