ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು 2018 ನೇ ಸಾಲಿನ “ಬಸವಶ್ರೀ ಪ್ರಶಸ್ತಿ”ಗೆ ಆಯ್ಕೆ

0
455

ಚಿತ್ರದುರ್ಗದ ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

ಚಿತ್ರದುರ್ಗ: ಇಲ್ಲಿನ ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ 2018 ನೇ ಸಾಲಿನ “ಬಸವಶ್ರೀ” ಪ್ರಶಸ್ತಿಗೆ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

ನಗದು ಬಹುಮಾನ : ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.ಈ ಬಸವಶ್ರೀ ಪ್ರಶಸ್ತಿಯನ್ನು 1997 ರಿಂದಲೂ ನೀಡಲಾಗುತ್ತಿದೆ. 

ಯಾವಾಗ ಪ್ರಶಸ್ತಿ ವಿತರಿಸುವರು: 2019 ಮೇ 7ರ ಬೆಳಗ್ಗೆ 11ಕ್ಕೆ ಶ್ರೀ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜನೆಗೊಳ್ಳಲಿರುವ ಸರ್ವ ಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು.

ಯಾವ ಕಾರಣಕ್ಕೆ ಈ ಪ್ರಶಸ್ತಿಯನ್ನು ಚಂಪಾ ಅವರಿಗೆ ನೀಡಲಾಗುತ್ತಿದೆ:   ‘ಸಾಹಿತ್ಯ ಕ್ಷೇತ್ರಕ್ಕೆ ಚಂಪಾ ಅವರು ನೀಡಿದ ಕೊಡುಗೆ ಅನನ್ಯ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ವೈಚಾರಿಕತೆಗೆ ಒತ್ತಾಸೆಯಾಗಿ ನಿಂತು ಚಳವಳಿ ರೂಪಿಸಿದ್ದಾರೆ’ ಎಂದರು.

‘ಹಾಸ್ಯ, ವಿಡಂಬನೆ, ನೇರ– ನಿಷ್ಠುರ ನಡೆಗೆ ಮಾದರಿಯಾಗಿದ್ದಾರೆ. 2018ನೇ ಸಾಲಿನ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದ್ದು ಮಠಕ್ಕೂ ಸಂತಸ ತಂದಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2017ನೇ ಸಾಲಿನ “ಬಸವಶ್ರೀ” ಪ್ರಶಸ್ತಿಯನ್ನು  ನೇ ಸಾಲಿನ ಕಾಮೇಗೌಡರಿಗೆ ನೀಡಲಾಗಿದೆ.