ಸಾಲ, ಠೇವಣಿ ಬಡ್ಡಿ ದರ ಕಡಿತ ಮಾಡಿದ ಎಸ್.ಬಿ.ಐ

0
16

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ,ಐ) ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂ.ಸಿ.ಎಲ್.ಆರ್) ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.05 ರಷ್ಟು ತಗ್ಗಿಸಿದೆ.

ಮುಂಬೈ(ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ,ಐ) ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂ.ಸಿ.ಎಲ್.ಆರ್) ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.05 ರಷ್ಟು ತಗ್ಗಿಸಿದೆ.

ಇದರ ಜತೆಗೆ, ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇ 0.15 ರಿಂದ ಶೇ 0.75 ರವರೆಗೆ ಕಡಿಮೆ ಮಾಡಿದೆ. ಹೊಸ ಬಡ್ಡಿ ದರಗಳು ಇದೇ ನವೆಂಬರ್ 10 ರಿಂದ ಜಾರಿಗೆ ಬರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್ ಸತತ 7 ನೇ ಬಾರಿಗೆ ಬಡ್ಡಿ ದರಗಳನ್ನು ಇಳಿಸಿದಂತಾಗಿದೆ.

ಬಹುತೇಕ ಸಾಲಗಳಿಗೆ ಪರಿಗಣಿಸುವ ಒಂದು ವರ್ಷದ ಎಂ.ಸಿ.ಎಲ್.ಆರ್ ಈಗ ಶೇ 8 ಕ್ಕೆ ಇಳಿಯಲಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಗದು ಇರುವುದರಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಕಡಿಮೆ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಠೇವಣಿ ಬಡ್ಡಿ ದರ: ಒಂದು ವರ್ಷದಿಂದ ಎರಡು ವರ್ಷಗಳ ಒಳಗಿನ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.15 ರಷ್ಟು ಇಳಿಸಲಾಗಿದೆ. 1 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.30 ರಿಂದ ಶೇ 0.75 ರವರೆಗೆ ಕಡಿಮೆ ಮಾಡಲಾಗಿದೆ.