ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜೀನಾಮೆ

0
21

ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ರಂಜಿತ್‌ ಕುಮಾರ್‌ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ರಂಜಿತ್‌ ಕುಮಾರ್‌ ಅವರು 2014ರಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ನೇಮಕಗೊಂಡಿದ್ದರು. ಸಾಂವಿಧಾನಿಕ ಕಾನೂನು, ಸೇವಾ ವಿಷಯಗಳು, ತೆರಿಗೆ ಹಾಗೂ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಪರಿಣತರಾಗಿ­ರುವ ರಂಜಿತ್‌ ಕುಮಾರ್‌ ಅವರ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯು ಅಂತಿಮ­ಗೊಳಿಸಿತ್ತು.

ಈ ಹಿಂದೆ ಅಟಾರ್ನಿ ಜನರಲ್‌ ಮುಕುಲ್ ರೋಹಟಗಿ ಅವರು ಸಹ ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.