ಸಾಲಮನ್ನಾ ಅರ್ಜಿ ಗಡುವು ವಿಸ್ತರಣೆ

0
918

ರೈತರ ಸಾಲ ಮನ್ನಾ ಯೋಜನೆಯಡಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಅ. 31ರವರೆಗೆ ವಿಸ್ತರಿಸಲಾಗಿದೆ. ಅಗತ್ಯವಾದಲ್ಲಿ ಇಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಹಕಾರ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆಯಡಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಅಕ್ಟೋಬರ್. 31ರವರೆಗೆ ವಿಸ್ತರಿಸಲಾಗಿದೆ. ಅಗತ್ಯವಾದಲ್ಲಿ ಇನ್ನಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಹಕಾರ ಇಲಾಖೆ ಸುತ್ತೋಲೆ ಹೊರಡಿಸಿದೆ.

ಅರ್ಜಿ ಸಲ್ಲಿಕೆ ಕುರಿತಂತೆ ಅಧಿಕಾರಿ ಗಳು ರೈತರ ಮೇಲೆ ಯಾವುದೇ ಒತ್ತಡ ಹೇರಬಾರದು. ಸಾಲ ಮನ್ನಾ ಅರ್ಜಿ ಹಾಗೂ ಸ್ವಯಂ ದೃಢೀಕರಣದ ಅರ್ಜಿಯನ್ನು ಆಯಾ ಸಹಕಾರ ಸಂಘಕ್ಕೆ ಕೊಟ್ಟಿದ್ದರೆ ಅಂತಹ ರೈತರು ಮತ್ತೊಮ್ಮೆ ಅರ್ಜಿ ಕೊಡುವ ಅಗತ್ಯವಿಲ್ಲ.

ಭರ್ತಿ ಮಾಡಿದ ಅರ್ಜಿ ನಮೂನೆ ಜತೆಯಲ್ಲಿ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಹಾಗೂ ಲಭ್ಯವಿದ್ದಲ್ಲಿ ಪಾನ್ ಕಾರ್ಡ್ ಝುರಾಕ್ಸ್ ಪ್ರತಿಯನ್ನು ಮಾತ್ರ ಅಧಿಕಾರಿಗಳು ಪಡೆಯಬೇಕು. ರೈತರ ಪಹಣಿ ಸಹಕಾರಿ ಸಂಘದಲ್ಲೇ ಲಭ್ಯ ಇರುವುದರಿಂದ ಬೇರಾವುದೇ ದಾಖಲೆಗಳಿಗಾಗಿ ರೈತರನ್ನು ಒತ್ತಾಯಿಸಬಾರದು.