ಸಾರ್ವಜನಿಕ ಪ್ರದರ್ಶನಕ್ಕೆ ಸೂಪರ್ ಸಾನಿಕ್ ಸಜ್ಜು : ನಾಸಾ

0
23

ಸೂಪರ್ ಸಾನಿಕ್ ವಿಮಾನಗಳನ್ನು ಸಾರ್ವಜನಿಕವಾಗಿ ಹಾರಾಟ ನಡೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಮುಂದಾಗಿದೆ.

ವಾಷಿಂಗ್ಟನ್(ಪಿಟಿಐ): ಸೂಪರ್ ಸಾನಿಕ್ ವಿಮಾನಗಳನ್ನು ಸಾರ್ವಜನಿಕವಾಗಿ ಹಾರಾಟ ನಡೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಮುಂದಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸುವ ಈ ವಿಮಾನಗಳ ಹಾರಾಟ ಪ್ರದರ್ಶನವನ್ನು ಭೂಮಿಯ ಮೇಲೆ ನಡೆಸುವುದನ್ನು ಅಮೆರಿಕ ನಿಷೇಧಿಸಿದೆ. ಇದು ಬಾರಿ ಶಬ್ದ ಮಾಡುವುದರಿಂದ ಕಟ್ಟಡಗಳಿಗೂ ಹಾನಿ ಮಾಡುವ ಸಾಧ್ಯತೆಗಳಿರುವುದರಿಂದ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಹೀಗಾಗಿ ಸೂಪರ್ ಸಾನಿಕ್ ರೀತಿಯಲ್ಲಿ ಹೆಚ್ಚು ಶಬ್ದವಾಗದಂತೆ ಎಲ್ಲ ರೀತಿಯಲ್ಲಿ ಹೆಚ್ಚು ಶಬ್ದವಾಗದಂತೆ ಎಲ್ಲ ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವ ನಾಸಾ ಈ ಪ್ರದರ್ಶನಕ್ಕೆ ಮುಂದಾಗಿದೆ.

ಯುದ್ದ ವಿಮಾನ ಜೆಟ್ ಎಫ್/ಎ-18 ಬಳಸಿಕೊಂಡು ನಿಗದಿಪಡಿಸಿದ ಪ್ರದೇಶದಲ್ಲಿ ಈ ಹಾರಾಟ ಪ್ರದರ್ಶನ ನಡೆಸಲು ಯೋಜನೆ ರೂಪಿಸಲಾಗಿದೆ. 2011 ರಲ್ಲಿ ಕ್ಯಾಲಿಪೋರ್ನಿಯಾದ ಎಡ್ವರ್ಡ್ ವಾಯು ನೆಲೆಯಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಇಲ್ಲಿ ವಾಸಿಸುವ ಅಮೆರಿಕ ಮಿಲಿಟರಿ ಸಮುದಾಯದವರ ನೆರವು ಪಡೆಯಲಾಗಿತ್ತು. ಈ ಬಾರಿ ಸಾನಿಕ್ ಶಬ್ದದ ಹೆಚ್ಚು ಪರಿಚಯವಿಲ್ಲದ ಜನರನ್ನು ಬಳಸಿಕೊಂಡು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸುವ ಎಕ್ಸ್-59 ವಿಮಾನವನ್ನು ನಿರ್ಮಿಸಿಕೊಡುವಂತೆ ನಾಸಾ ಇತ್ತೀಚೆಗೆ ಲಾಖೀಡ್ ಮಾರ್ಟಿನ್ ಏರೋನಾಟಿಕ್ಸ್ ಕಂಪನಿಗೆ 1699.45 ಕೋಟಿ ಮೊತ್ತದ ಗುತ್ತಿಗೆ ನೀಡಿದೆ. ಈ ವಿಮಾನಕ್ಕೆ ಸೂಪರ್ ಸಾನಿಕ್ ತಂತ್ರಜ್ಞಾನ ಸಹ ಬಳಕೆಯಾಗಿದೆ. “ಎಕ್ಸ್-59 ವಿಮಾನವನ್ನು ಹಲವು ನಗರ ಮತ್ತು ಪಟ್ಟಣಗಳ ಮೇಲೆ ಹಾರಾಟ ನಡೆಸಲು ನಾಸಾ ಉದ್ದೇಶಿಸಿದೆ. ಇದರಿಂದ ಸೂಪರ್ ಸಾನಿಕ್ ವಿಮಾನದಿಂದ ಉಂಟಾಗುವ ಶಬ್ದವನ್ನು ಜನರು ಯಾವ ರೀತಿ ಗ್ರಹಿಸಿದರು ಮತ್ತು ಯಾವ ರೀತಿಯ ಪರಿಣಾಮ ಬೀರಿತು ಎನ್ನುವ ಬಗ್ಗೆ ವಿಶ್ಲೇಷಣೆ ನಡೆಸಲಿದೆ.

ಗಲ್ಫ್ ಮೆಕ್ಸಿಕೊ ಸಮೀಪದ ಗಲ್ಫ್ ಕೋಸ್ಟ್ ನಗರದ ಬಳಿ ಈ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.