ಸಾರಿಡಾನ್‌ ಸೇರಿ 3 ಬ್ರಾಂಡ್‌ಗಳಿಗೆ ಬ್ಯಾನ್‌ನಿಂದ ವಿನಾಯಿತಿ

0
768

ಇತ್ತೀಚೆಗೆ ಕೇಂದ್ರ ಸರಕಾರ ನಿಷೇಧಿಸಿದ್ದ ತಲೆ ನೋವು ನಿವಾರಣೆಗೆ ಬಳಸುವ ಸಾರಿಡಾನ್‌, ಶೀತ ನಿವಾರಣೆಯ ಪೆರಿಟನ್‌ ಎಕ್ಸ್‌ಪೆಕ್ಟೋರೆಂಟ್‌, ಡಾರ್ಟ್‌ ಎನ್ನುವ ಮೂರು ಬ್ರಾಂಡ್‌ನ ಔಷಧಗಳಿಗೆ ಸುಪ್ರೀಂ ಕೋರ್ಟ್‌ ವಿನಾಯಿತಿ ನೀಡಿದೆ. ಹೀಗಾಗಿ ಅವುಗಳ ಮಾರಾಟ ಎಂದಿನಂತೆಯೇ ಮುಂದುವರಿಯಲಿದೆ.

ಹೊಸದಿಲ್ಲಿ: ಇತ್ತೀಚೆಗೆ ಕೇಂದ್ರ ಸರಕಾರ ನಿಷೇಧಿಸಿದ್ದ ತಲೆ ನೋವು ನಿವಾರಣೆಗೆ ಬಳಸುವ ಸಾರಿಡಾನ್‌, ಶೀತ ನಿವಾರಣೆಯ ಪೆರಿಟನ್‌ ಎಕ್ಸ್‌ಪೆಕ್ಟೋರೆಂಟ್‌, ಡಾರ್ಟ್‌ ಎನ್ನುವ ಮೂರು ಬ್ರಾಂಡ್‌ನ ಔಷಧಗಳಿಗೆ ಸುಪ್ರೀಂ ಕೋರ್ಟ್‌ ವಿನಾಯಿತಿ ನೀಡಿದೆ. ಹೀಗಾಗಿ ಅವುಗಳ ಮಾರಾಟ ಎಂದಿನಂತೆಯೇ ಮುಂದುವರಿಯಲಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಗ್ಲಾಕ್ಸೊಸ್ಮಿತ್‌ಕ್ಲಿನ್‌ ಮತ್ತು ಪಿರಮಲ್‌ ಕಂಪನಿಗಳಿಗೆ ನಿರಾಳವಾಗಿದೆ. ಸರಕಾರದ ಇತ್ತೀಚಿನ ಆದೇಶವನ್ನು ಪ್ರಶ್ನಿಸಿ ಔಷಧಿ ಉತ್ಪಾದಕ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸಾರಿಡಾನ್‌ ಸೇರಿದಂತೆ ಮೂರು ಬ್ರಾಂಡ್‌ಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ. 

ಮಧುಮೇಹದ ಚಿಕಿತ್ಸೆಗೆ ಬಳಸುವ ಗ್ಲೂಕೊನಾರ್ಮ್‌ಪಿಜಿ, ಪ್ಯಾಂಡರ್ಮ್‌(ಸ್ಕಿನ್‌ ಕ್ರೀಮ್‌) ಆಂಟಿಬಯೋಟಿಕ್‌ಗಳಾದ ಲುಪಿಡಿಕ್ಲೋಕ್ಸ್‌, ಟಾಕ್ಸಿಮ್‌ ಎ ಜಡ್ಸ್‌ ಸೇರಿದಂತೆ 328 ನಿಶ್ಚಿತ ಪ್ರಮಾಣದ ಸಂಯೋಜನೆಯ(ಎಫ್‌ಡಿಸಿ) ಔಷಧಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿಸಿತ್ತು. ಈ ಎಫ್‌ಡಿಸಿಯ ಔಷಧಗಳು ಆರೋಗ್ಯಕ್ಕೆ ಅಪಾಯ ಎನ್ನಲಾಗಿದ್ದು, ಅವುಗಳನ್ನು ಹಂತಹಂತವಾಗಿ ಸರಕಾರ ನಿಷೇಧಿಸುತ್ತಾ ಬರುತ್ತಿದೆ.