ಸಾಧಕರಿಗೆ ಆಯುರ್ವೇದ ಪ್ರಶಸ್ತಿ

0
30

ಆಯುರ್ವೇದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಬೈದ್ಯನಾಥ ಸ್ಥಾಪಕ ಪಂಡಿತ್‌ ರಾಮ ನಾರಾಯಣ ಶರ್ಮಾ ರಾಷ್ಟ್ರೀಯ ಆಯುರ್ವೇದ ಪ್ರಶಸ್ತಿಯನ್ನು ಏಳು ಮಂದಿ ಸಾಧಕರಿಗೆ ಪ್ರದಾನ ಮಾಡಲಾಗಿದೆ.

2008ರಿಂದ 2014ರ ಸಾಲಿನ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಇತ್ತೀಚಿಗೆ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರು:-

# ನವದೆಹಲಿಯ ಆಯುರ್ವೇದ ವೈದ್ಯ ವಿವೇಕಾನಂದ ಪಾಂಡೆ ಅವರಿಗೆ 2008ನೆ ಸಾಲಿನ,

# ಪುಣೆಯ ದಿವಂಗತ ಡಾ. ರಾಮಚಂದ್ರ ಬಳ್ಳಾಲ್‌ ಗೋಗ್ಟೆ (2009),

# ಬೆಂಗಳೂರಿನ ಡಾ. ಜಯಪ್ರಕಾಶ್‌ ನಾರಾಯಣ (2010),

# ವಾರಾಣಸಿಯ ಡಾ. ಜಿ. ಪಿ. ದುಬೆ (2011),

# ಡಾ. ಕೃಷ್ಣಚಂದ್‌ ಚುನೇಕರ್‌ (2012),

# ರಾಂಚಿಯ ಡಾ. ಸಿದ್ಧಿನಂದನ್‌ ಮಿಶ್ರಾ (2013) ಮತ್ತು

# ಜೈಪುರದ ಡಾ. ಬನ್ವರಿಲಾಲ್‌ ಗೌರ್‌ ಅವರು 2014ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 2 ಲಕ್ಷ ನಗದು ಒಳಗೊಂಡಿದೆ.